ವೋಲ್ವೋ ಬಸ್ ಟಿಕೆಟ್ ದರ ಹೆಚ್ಚಿಸಿಲ್ಲ: ಕೆಎಸ್ಆರ್ಟಿಸಿ ಸ್ಪಷ್ಟನೆ
- by Suddi Team
- February 6, 2026
- 392 Views
ಬೆಂಗಳೂರು: ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಬಸ್ ದರಗಳು ಮತ್ತೆ ಏರಿಕೆಯಾಗಿವೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿಯನ್ನು ಕೆಎಸ್ಆರ್ಟಿಸಿ ಅಧಿಕೃತವಾಗಿ ನಿರಾಕರಿಸಿದೆ. ಪ್ರಸ್ತುತ ಯಾವುದೇ ಮಾರ್ಗದಲ್ಲೂ ಟಿಕೆಟ್ ದರವನ್ನು ಹೆಚ್ಚಿಸಿಲ್ಲ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರತಿಷ್ಠಿತ ‘ಐರಾವತ ಕ್ಲಬ್ ಕ್ಲಾಸ್’ ಬಸ್ ದರದಲ್ಲಿ ಒಂದು ರೂಪಾಯಿ ಹೆಚ್ಚಳವಾಗಿದೆ ಎಂಬ ಪೋಸ್ಟ್ವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಈ ಕುರಿತು ಮಾಹಿತಿ ನೀಡಿರುವ ನಿಗಮ, ಮೈಸೂರು-ಬೆಂಗಳೂರು ಮಾರ್ಗದ ದರವು ಮೊದಲಿನಂತೆಯೇ ₹430 ಇದೆ ಎಂದು ತಿಳಿಸಿದೆ. ಪ್ರಯಾಣಿಕರೊಬ್ಬರಿಗೆ ಟಿಕೆಟ್ ನೀಡುವಾಗ ಇಟಿಎಂ (ETM) ಯಂತ್ರದಲ್ಲಿ ತಾಂತ್ರಿಕ ದೋಷದಿಂದಾಗಿ ತಪ್ಪಾದ ರೂಟ್ ಆಯ್ಕೆಯಾಗಿದ್ದರಿಂದ ₹431 ಬಂದಿತ್ತು. ಇದು ಕೇವಲ ತಾಂತ್ರಿಕ ತಪ್ಪೇ ಹೊರತು ದರ ಏರಿಕೆಯಲ್ಲ ಎಂದು ಕೆಎಸ್ಆರ್ಟಿಸಿ ಸ್ಪಷ್ಟಪಡಿಸಿದೆ.
ಸಧ್ಯ ತಾಂತ್ರಿಕ ದೋಷ ಸರಿಪಡಿಸಲಾಗಿದ್ದು430 ರೂ.ಗಳನ್ನೇ ಪಡೆಯಲಾಗುತ್ತಿದೆ ಎಂದು ಕೆಎಸ್ಆರ್ಟಿಸಿ ಸ್ಪಷ್ಟೀಕರಣದ ಮೂಲಕ ವದಂತಿಗೆ ತೆರೆ ಎಳೆದಿದೆ.
Related Articles
Thank you for your comment. It is awaiting moderation.


Comments (0)