ಬೆಂಗಳೂರು-ಬಳ್ಳಾರಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೆಎಸ್ಆರ್‌ಟಿಸಿಯಿಂದ ಹೊಸ ಮಲ್ಟಿ ಆಕ್ಸಲ್ ಬಸ್ ಸೇವೆ ಆರಂಭ

ಬೆಂಗಳೂರು: ಸಿಲಿಕಾನ್ ಸಿಟಿಯಿಂದ ಗಣಿ ನಾಡು ಬಳ್ಳಾರಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಸಿಹಿ ಸುದ್ದಿ ನೀಡಿದೆ. ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಆರಾಮದಾಯಕ ಪ್ರಯಾಣ ಕಲ್ಪಿಸಲು ನೂತನ ಮಲ್ಟಿ ಆಕ್ಸಲ್ (Multi-Axle) ಸಾರಿಗೆ ಸೇವೆಯನ್ನು ಆರಂಭಿಸಲಾಗಿದೆ.

ಈ ಹೊಸ ಬಸ್ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಹೊರಟು ತುಮಕೂರು, ಸಿರಾ, ಹಿರಿಯೂರು ಹಾಗೂ ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿಯನ್ನು ತಲುಪಲಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಪ್ರತಿ ಪ್ರಯಾಣಿಕರಿಗೆ ರೂ. 802/- ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.

ಹೊಸ ಮಲ್ಟಿ ಆಕ್ಸಲ್ ಬಸ್ ವೇಳಾಪಟ್ಟಿ (Time Table)

ಬೆಂಗಳೂರಿನಿಂದ ಬಳ್ಳಾರಿ ಕಡೆಗೆ:

ಕೆಂಪೇಗೌಡ ಬಸ್ ನಿಲ್ದಾಣ (ಹೊರಡುವ ಸಮಯ): ಸಂಜೆ 16:00 ಗಂಟೆಗೆ

ಚಳ್ಳಕೆರೆ (ತಲುಪುವ ಸಮಯ): ರಾತ್ರಿ 20:00 ಗಂಟೆಗೆ

ಬಳ್ಳಾರಿ (ತಲುಪುವ ಸಮಯ): ರಾತ್ರಿ 21:45 ಗಂಟೆಗೆ

ಬಳ್ಳಾರಿಯಿಂದ ಬೆಂಗಳೂರು ಕಡೆಗೆ:

ಬಳ್ಳಾರಿ (ಹೊರಡುವ ಸಮಯ): ಸಂಜೆ 17:06 ಗಂಟೆಗೆ

ಚಳ್ಳಕೆರೆ (ತಲುಪುವ ಸಮಯ): ರಾತ್ರಿ 18:30 ಗಂಟೆಗೆ

ಕೆಂಪೇಗೌಡ ಬಸ್ ನಿಲ್ದಾಣ (ತಲುಪುವ ಸಮಯ): ರಾತ್ರಿ 22:40 ಗಂಟೆಗೆ

ಹಂತ-ಹಂತದ ದರ ವಿವರ (Fare Details):

ಬೆಂಗಳೂರಿನಿಂದ ಚಳ್ಳಕೆರೆಗೆ: ರೂ. 634/-

ಬೆಂಗಳೂರಿನಿಂದ ಬಳ್ಳಾರಿಗೆ: ರೂ. 802/-

ಬೆಂಗಳೂರು-ಬಳ್ಳಾರಿ ನಡುವಿನ ಇತರೆ ಪ್ರತಿಷ್ಠಿತ ಸಾರಿಗೆಗಳ ವಿವರ

ಪ್ರಸ್ತುತ ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಐರಾವತ ಕ್ಲಬ್ ಕ್ಲಾಸ್ ಮತ್ತು ಐರಾವತ ಕ್ಲಬ್ ಕ್ಲಾಸ್ 2.0 ಬಸ್‌ಗಳ ವೇಳಾಪಟ್ಟಿ ಮತ್ತು ದರ ವಿವರ ಕೆಳಗಿನಂತಿದೆ:

ಬೆಂಗಳೂರಿನಿಂದ ಬಳ್ಳಾರಿ ಮಾರ್ಗ (ಹೊರಡುವ-ತಲುಪುವ ಸಮಯ):

06:40 ರಿಂದ 12:45 | ಐರಾವತ ಕ್ಲಬ್ ಕ್ಲಾಸ್ | ದರ: ವಯಸ್ಕರು ₹802, ಮಕ್ಕಳು ₹629

14:00 ರಿಂದ 20:00 | ಐರಾವತ ಕ್ಲಬ್ ಕ್ಲಾಸ್ 2.0 | ದರ: ವಯಸ್ಕರು ₹864, ಮಕ್ಕಳು ₹678

16:00 ರಿಂದ 21:45 | ಐರಾವತ ಕ್ಲಬ್ ಕ್ಲಾಸ್ | ದರ: ವಯಸ್ಕರು ₹802, ಮಕ್ಕಳು ₹629

18:00 ರಿಂದ 23:59 | ಐರಾವತ ಕ್ಲಬ್ ಕ್ಲಾಸ್ | ದರ: ವಯಸ್ಕರು ₹802, ಮಕ್ಕಳು ₹629

23:45 ರಿಂದ 05:45 | ಐರಾವತ ಕ್ಲಬ್ ಕ್ಲಾಸ್ | ದರ: ವಯಸ್ಕರು ₹802, ಮಕ್ಕಳು ₹629

ಬಳ್ಳಾರಿಯಿಂದ ಬೆಂಗಳೂರು ಮಾರ್ಗ (ಹೊರಡುವ-ತಲುಪುವ ಸಮಯ):

05:40 ರಿಂದ 11:15 | ಐರಾವತ ಕ್ಲಬ್ ಕ್ಲಾಸ್ | ದರ: ವಯಸ್ಕರು ₹802, ಮಕ್ಕಳು ₹629

06:50 ರಿಂದ 12:24 | ಐರಾವತ ಕ್ಲಬ್ ಕ್ಲಾಸ್ | ದರ: ವಯಸ್ಕರು ₹802, ಮಕ್ಕಳು ₹629

16:03 ರಿಂದ 21:45 | ಐರಾವತ ಕ್ಲಬ್ ಕ್ಲಾಸ್ | ದರ: ವಯಸ್ಕರು ₹802, ಮಕ್ಕಳು ₹629

17:06 ರಿಂದ 22:40 | ಐರಾವತ ಕ್ಲಬ್ ಕ್ಲಾಸ್ | ದರ: ವಯಸ್ಕರು ₹802, ಮಕ್ಕಳು ₹629

23:45 ರಿಂದ 05:15 | ಐರಾವತ ಕ್ಲಬ್ ಕ್ಲಾಸ್ 2.0 | ದರ: ವಯಸ್ಕರು ₹864, ಮಕ್ಕಳು ₹678

ಬೆಂಗಳೂರು ಮತ್ತು ಬಳ್ಳಾರಿ ನಡುವೆ ಸಂಚರಿಸುವ ಸಾರ್ವಜನಿಕ ಪ್ರಯಾಣಿಕರು ಈ ಸುಧಾರಿತ ಸಾರಿಗೆ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೆ.ಎಸ್.ಆರ್.ಟಿ.ಸಿ ಪ್ರಕಟಣೆಯಲ್ಲಿ ಕೋರಿದೆ.

 

Related Articles

Comments (0)

Leave a Comment