ಮೆಟ್ರೋ ಪ್ರಯಾಣಿಕರೆ ಗಮನಿಸಿ; ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಇಂದು ತಾತ್ಕಾಲಿಕ ವ್ಯತ್ಯಯ
- by Suddi Team
- June 22, 2025
- 2 Views
ಬೆಂಗಳೂರು: ನಮ್ಮ ಮೆಟ್ರೋದ ನೇರಳ ಮಾರ್ಗದ ಹಾಲಸೂರು ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ಇಂದು ನಿಗದಿತ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮೆಟ್ರೋ ಸೇವೆಗಳನ್ನು ಎಂ.ಜಿ. ರಸ್ತೆ – ಬೈಯ್ಯಪ್ಪನಹಳ್ಳಿ ಮಾರ್ಗದ ಮಧ್ಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್ಸಿಎಲ್) ತಿಳಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಎಂಆರ್‌ಸಿಎಲ್, ನೇರಳೆ ಮಾರ್ಗದ ಇತರೆ ಮಾರ್ಗಗಳಾದ ಚಲ್ಲಘಟ್ಟದಿಂದ ಎಂ.ಜಿ. ರಸ್ತೆ ಮತ್ತು ಬೈಯ್ಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ (ಕಾಡುಗೋಡಿ) ಹಾಗೂ ಹಸಿರು ಮಾರ್ಗದ ರೆಸ್ಟ್ ಸಂಸ್ಥೆ ಮತ್ತು ಮಾದಾವರ ನಡುವೆ ಮೆಟ್ರೋ ಸೇವೆಗಳು ಬೆಳಿಗ್ಗೆ 7:00 ಗಂಟೆಯಿಂದ ನಿಗದಿತ ಸಮಯದಂತೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದೆ.
ಬಿಎಂಆರ್‌ಸಿಎಲ್ ಈ ತಾತ್ಕಾಲಿಕ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತಿದ್ದು, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪೂರ್ವತಯಾರಿಗೆ ಯೋಜಿಸಿಕೊಳ್ಳುವಂತೆ ವಿನಂತಿಸಿಕೊಂಡಿದೆ.
Related Articles
Thank you for your comment. It is awaiting moderation.
Comments (0)