ಕೆಎಸ್‌ಆರ್‌ಟಿಸಿ ಅಂತರ ನಿಗಮ ವರ್ಗಾವಣೆ: ನೌಕರರ ಸಂಭವನೀಯ ಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) 2026ನೇ ಸಾಲಿನ ದರ್ಜೆ-3 (ಮೇಲ್ವಿಚಾರಕೇತರ) ಮತ್ತು ದರ್ಜೆ-4ರ ನೌಕರರ ಅಂತರ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ ಹೊರಬಿದ್ದಿದೆ. ಈ ವರ್ಗಾವಣೆ ಪ್ರಕ್ರಿಯೆಯ ಸಂಭವನೀಯ ಪಟ್ಟಿಯನ್ನು ಇಂದು (ಏಪ್ರಿಲ್ 9) ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಪರಸ್ಪರ ವರ್ಗಾವಣೆ (Mutual Transfer) ಹಾಗೂ ಸಾಮಾನ್ಯ ವರ್ಗಾವಣೆ (ಪತಿ-ಪತ್ನಿ ಪ್ರಕರಣಗಳು, ಶೇ. 40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹಾಗೂ ತೀವ್ರ ಅನಾರೋಗ್ಯದ ಪ್ರಕರಣಗಳು) ಕೋರಿ ಅರ್ಜಿ ಸಲ್ಲಿಸಿದ್ದ ನೌಕರರ ಪಟ್ಟಿಯನ್ನು ksrtc.karnataka.gov.in ನಲ್ಲಿ ವೀಕ್ಷಿಸಬಹುದಾಗಿದೆ.

ಆಕ್ಷೇಪಣೆಗೆ ಅವಕಾಶ:

ಪ್ರಕಟಿತ ಸಂಭವನೀಯ ಪಟ್ಟಿಯಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅಥವಾ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ನೌಕರರಿಗೆ ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 9ರಿಂದ ಏಪ್ರಿಲ್ 16ರ ಸಂಜೆ 5:30ರ ಒಳಗೆ ನೌಕರರು ತಮ್ಮ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಬೇಕು.

ಗಮನಿಸಬೇಕಾದ ಅಂಶಗಳು:

ಆಕ್ಷೇಪಣೆಗಳನ್ನು ಕಡ್ಡಾಯವಾಗಿ ಸಂಬಂಧಪಟ್ಟ ವಿಭಾಗದ ಆಡಳಿತಾಧಿಕಾರಿಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು.

ವೈಯಕ್ತಿಕವಾಗಿ ಅಥವಾ ಅಂಚೆ ಮೂಲಕ ಕೇಂದ್ರ ಕಚೇರಿಗೆ ಕಳುಹಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

 

Related Articles

Comments (0)

Leave a Comment