ಬೆಂಗಳೂರಿನಿಂದ ‘ಜೋಗ ಜಲಪಾತ’ ಪ್ಯಾಕೇಜ್ ಟೂರ್ ಪ್ರವಾಸ: ಕೆ.ಎಸ್.ಆರ್.ಟಿ.ಸಿ ಹೊಸ ಬಸ್ ಸೇವೆ ಆರಂಭ
- by Suddi Team
- August 4, 2026
- 14 Views
ಬೆಂಗಳೂರು: ಪ್ರಕೃತಿ ಪ್ರೇಮಿಗಳು ಮತ್ತು ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆ.ಎಸ್.ಆರ್.ಟಿ.ಸಿ) ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ರಾಜಧಾನಿ ಬೆಂಗಳೂರಿನಿಂದ ವಿಶ್ವವಿಖ್ಯಾತ ‘ಜೋಗ ಜಲಪಾತ’ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಲು ನೂತನ ‘ಬೆಂಗಳೂರು-ಜೋಗ ಜಲಪಾತ ಪ್ಯಾಕೇಜ್ ಟೂರ್’ ಪ್ರವಾಸ ಸಾರಿಗೆಯನ್ನು ಆರಂಭಿಸುತ್ತಿರುವುದಾಗಿ ನಿಗಮ ಪ್ರಕಟಿಸಿದೆ.

ವಾರಾಂತ್ಯದಲ್ಲಿ ಪ್ರಯಾಣ (ಫ್ರೈಡೇ – ಸ್ಯಾಟರ್ಡೇ):
ಈ ವಿಶೇಷ ಪ್ಯಾಕೇಜ್ ಪ್ರವಾಸವು ಪ್ರತಿ ವಾರ ಶುಕ್ರವಾರ ಮತ್ತು ಶನಿವಾರಗಳಂದು ಬೆಂಗಳೂರಿನಿಂದ ಹೊರಡಲಿದೆ. ಪ್ರವಾಸಿಗರಿಗೆ ಆರಾಮದಾಯಕ ಪ್ರಯಾಣ ಒದಗಿಸಲು ನಾನ್ ಎಸಿ ಸ್ಲೀಪರ್ (ಮಲಗುವ ಆಸನ) ವಾಹನಗಳನ್ನು ಈ ಪ್ರವಾಸಕ್ಕೆ ಬಳಸಲಾಗುತ್ತಿದ್ದು, ಇದು ಶಿವಮೊಗ್ಗ ಮತ್ತು ಸಾಗರ ಮಾರ್ಗವಾಗಿ ಸಂಚರಿಸಲಿದೆ.
ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ:
ಒಟ್ಟು 840 ಕಿಲೋಮೀಟರ್ ವ್ಯಾಪ್ತಿಯ ಈ ಪ್ರವಾಸದಲ್ಲಿ ಜೋಗ ಜಲಪಾತ ಮಾತ್ರವಲ್ಲದೆ ಮಲೆನಾಡಿನ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳಾದ ವರದಹಳ್ಳಿ, ವರದಮೂಲ, ಇಕ್ಕೇರಿ ಮತ್ತು ಕೆಳದಿ ಸ್ಥಳಗಳ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಪ್ರವಾಸಿಗರಿಗೆ ಸಾಗರದಲ್ಲಿ ಶಾಪಿಂಗ್ ಮಾಡಲು ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ.
ಟಿಕೆಟ್ ದರ ಮತ್ತು ಸೌಲಭ್ಯಗಳು:
ಪ್ರಯಾಣಿಕರ ಅನುಕೂಲಕ್ಕಾಗಿ ಈ ಪ್ಯಾಕೇಜ್‌ನಲ್ಲಿ ಬಸ್ ಪ್ರಯಾಣದ ದರ ಸೇರಿದಂತೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ, ಗೈಡ್ ಶುಲ್ಕ (ಒಂದು ದಿನಕ್ಕೆ), ಜೋಗ ಜಲಪಾತದ ಪ್ರವೇಶ ಶುಲ್ಕ ಹಾಗೂ ಟೋಲ್ ಶುಲ್ಕಗಳನ್ನು ಒಳಗೊಂಡಿರುತ್ತದೆ.
ವಯಸ್ಕರಿಗೆ (Adults): ₹3,300/-
ಮಕ್ಕಳಿಗೆ (6 ರಿಂದ 12 ವರ್ಷ): ₹3,000/-
ಟಿಕೆಟ್ ಬುಕ್ಕಿಂಗ್ ಹೇಗೆ?
ಸಾರ್ವಜನಿಕ ಪ್ರಯಾಣಿಕರು ಈ ವಾರಾಂತ್ಯದ ಪ್ಯಾಕೇಜ್ ಟೂರ್‌ನ ಸೌಲಭ್ಯವನ್ನು ಪಡೆಯಲು ಹಾಗೂ ಮುಂಗಡ ಟಿಕೆಟ್ ಕಾಯ್ದಿರಿಸಲು ನಿಗಮದ ಅಧಿಕೃತ ವೆಬ್‌ಸೈಟ್‌ಗಳಾದ www.ksrtc.in ಅಥವಾ www.ksrtc.karnataka.gov.in ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿ ಹಾಗೂ ವಿಚಾರಣೆಗಾಗಿ ದೂರವಾಣಿ ಸಂಖ್ಯೆಗಳು: 080-26252625, 7760990100, 7760990560, 7760990287 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
Related Articles
Thank you for your comment. It is awaiting moderation.


Comments (0)