ವಿಮಾನ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ: ಕೆಂಪೇಗೌಡ ಏರ್‌ಪೋರ್ಟ್‌ನಿಂದ ಕೋಯಿಕೋಡ್‌ಗೆ ನೇರ ‘ಫ್ಲೈ ಬಸ್’ ಸಾರಿಗೆ ಆರಂಭ!

ಬೆಂಗಳೂರು: ಕೇರಳ ಹಾಗೂ ಕೊಡಗು ಭಾಗದ ವಿಮಾನ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭರ್ಜರಿ ಕೊಡುಗೆ ನೀಡಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ನೇರವಾಗಿ ಕೇರಳದ ಕೋಯಿಕೋಡ್‌ಗೆ ಹೊಸದಾಗಿ ಅತ್ಯಾಧುನಿಕ ‘ಫ್ಲೈ ಬಸ್’ (Fly Bus) ಸಾರಿಗೆಯನ್ನು ಆರಂಭಿಸುತ್ತಿರುವುದಾಗಿ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗ ಪ್ರಕಟಿಸಿದೆ.

ಮುಂಬರುವ ಆಗಸ್ಟ್ 15 ರಿಂದ ಈ ಐಷಾರಾಮಿ ಬಸ್ ಸೇವೆ ಅಧಿಕೃತವಾಗಿ ರಸ್ತೆಗಿಳಿಯಲಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ದೊಡ್ಡ ಮಟ್ಟದ ನೆಮ್ಮದಿ ತರಲಿದೆ.

ಬೆಂಗಳೂರು ಸಿಟಿ ಜನರಿಗೂ ಕನೆಕ್ಟಿವಿಟಿ:

ಈ ವಿಶೇಷ ಫ್ಲೈ ಬಸ್ ಕೇವಲ ಏರ್‌ಪೋರ್ಟ್ ಪ್ರಯಾಣಿಕರಿಗಷ್ಟೇ ಅಲ್ಲದೆ, ಬೆಂಗಳೂರು ನಗರದ ಜನರಿಗೂ ಸುಲಭ ಸಂಪರ್ಕ ಕಲ್ಪಿಸಲಿದೆ. ಈ ಬಸ್ ವಿಮಾನ ನಿಲ್ದಾಣದಿಂದ ಹೊರಟು ಯಲಹಂಕ, ಹೆಬ್ಬಾಳ ಹಾಗೂ ನಾಯಂಡಹಳ್ಳಿ ಮೆಟ್ರೋ ನಿಲ್ದಾಣಗಳ ಮೂಲಕ ಸಾಗುವುದರಿಂದ ನಗರದ ಪ್ರಯಾಣಿಕರೂ ಸಹ ಇಳಿಯಲು ಮತ್ತು ಹತ್ತಲು ಅವಕಾಶ ಕಲ್ಪಿಸಲಾಗಿದೆ.

ಮಾರ್ಗ ಮತ್ತು ನಿಗದಿಪಡಿಸಿದ ದರ:

ಈ ಬಸ್ ಬೆಂಗಳೂರಿನಿಂದ ಮೈಸೂರು, ಹುಣಸೂರು, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟಾ, ಮಾನಂತವಾಡಿ ಮತ್ತು ಕಲ್ಪಟ್ಟಾ ಮಾರ್ಗವಾಗಿ ಕೋಯಿಕೋಡ್ ತಲುಪಲಿದೆ. ದೂರದ ಪ್ರಯಾಣವನ್ನು ಅತ್ಯಂತ ಆರಾಮದಾಯಕವಾಗಿಸುವ ಈ ಐಷಾರಾಮಿ ಸಾರಿಗೆಗೆ ಪ್ರತಿ ಪ್ರಯಾಣಿಕರಿಗೆ ತಲಾ ರೂ. 1,500/- ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.

ವಿಮಾನ ಇಳಿದು ರೈಲು ಅಥವಾ ಟ್ಯಾಕ್ಸಿಗಳಿಗಾಗಿ ನಗರದ ಕೇಂದ್ರ ಭಾಗಕ್ಕೆ ಬರುವ ಭಾರಿ ಅಲೆದಾಟ ಮತ್ತು ದುಬಾರಿ ವೆಚ್ಚಕ್ಕೆ ಈ ಹೊಸ ಫ್ಲೈ ಬಸ್ ಬ್ರೇಕ್ ಹಾಕಲಿದ್ದು, ಪ್ರಯಾಣಿಕರ ಸಮಯ ಹಾಗೂ ಹಣ ಎರಡನ್ನೂ ಉಳಿಸಲಿದೆ.

ವೇಳಾಪಟ್ಟಿ-ದರಪಟ್ಟಿ:

 

Related Articles

Comments (0)

Leave a Comment