ಮರವಂತೆ ಕಡಲತೀರದ ಸೌಂದರ್ಯಕ್ಕೆ ಫಿದಾ ಆದ ಬಿ.ಎಲ್. ಸಂತೋಷ್: ಕಾವ್ಯಾತ್ಮಕ ಸಾಲುಗಳ ಮೂಲಕ ಪ್ರಕೃತಿ ವರ್ಣನೆ!

ಕುಂದಾಪುರ: ಪ್ರಕೃತಿಯ ಮಡಿಲಲ್ಲಿ ಕೆಲಕ್ಷಣ ಕಳೆಯುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಕರಾವಳಿಯ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಜಾಲತಾಣದಲ್ಲಿ ಹಂಚಿಕೊಂಡಿರುವ ಕಾವ್ಯಾತ್ಮಕ ಪೋಸ್ಟ್ ಇದೀಗ ಭಾರಿ ಗಮನ ಸೆಳೆಯುತ್ತಿದೆ.

ಬೈಂದೂರಿನಿಂದ ಉಡುಪಿಗೆ ತೆರಳುವ ಮಾರ್ಗಮಧ್ಯೆ ಕುಂದಾಪುರ ಸಮೀಪವಿರುವ ವಿಶ್ವಪ್ರಸಿದ್ಧ ಮರವಂತೆ ಕಡಲತೀರದಲ್ಲಿ ಅವರು ಕೆಲವು ಅಪರೂಪದ ಕ್ಷಣಗಳನ್ನು ಕಳೆದಿದ್ದಾರೆ.

ಕಡಲ ಸೌಂದರ್ಯಕ್ಕೆ ಕಾವ್ಯದ ಲೇಪನ

ಮರವಂತೆ ಬೀಚ್‌ನ ಸುಂದರ ಪರಿಸರ ಮತ್ತು ಅಲೆಗಳ ಸೌಂದರ್ಯವನ್ನು ಕಂಡು ಉಲ್ಲಸಿತರಾದ ಬಿ.ಎಲ್. ಸಂತೋಷ್ ಅವರು ಜಾಲತಾಣದಲ್ಲಿ ಕಾವ್ಯಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ:

“ಪಡುಗಡಲಿನ ತೆರೆ ದಡಗಳ ಬಡಿದು

ತೆರೆಯುದ್ದಕು ಜಯಭೇರಿಯ ಹೊಡೆದು

ಹಾಡುತಲಿರುವುದ ನಾವಾಲಿಸುವ ……..”

ಒಂದೆಡೆ ಸೌಪರ್ಣಿಕಾ ನದಿ, ಮತ್ತೊಂದೆಡೆ ಅರಬ್ಬಿ ಸಮುದ್ರದ ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಸೌಂದರ್ಯವನ್ನು ಸವಿದ ಅವರು, ಮರವಂತೆಯ ಈ ಅದ್ಭುತ ಪ್ರಕೃತಿ ದೃಶ್ಯವನ್ನು ಕಣ್ಣುಂಬಿಕೊಂಡಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜಕೀಯದ ಒತ್ತಡದ ವೇಳಾಪಟ್ಟಿಯ ನಡುವೆಯೂ ಕರಾವಳಿಯ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ, ಅದನ್ನು ಕನ್ನಡದ ಸುಂದರ ಕಾವ್ಯದ ಮೂಲಕ ವ್ಯಕ್ತಪಡಿಸಿರುವ ಅವರ ಈ ಪೋಸ್ಟ್‌ಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

 

Related Articles

Comments (0)

Leave a Comment