ಅತಿದೊಡ್ಡ ಬ್ಯಾಚ್; ನ.13ರಂದು ಐಎನ್‌ಎಸ್ ಚಿಲ್ಕಾದಲ್ಲಿ 3,300ಕ್ಕೂ ಹೆಚ್ಚು ಅಗ್ನಿವೀರ್‌ಗಳ ಪಾಸಿಂಗ್ ಔಟ್ ಪೆರೇಡ್

ನವದೆಹಲಿ: ಭಾರತೀಯ ನೌಕಾಪಡೆಯ ಒಂಬತ್ತನೇ ಬ್ಯಾಚ್‌ನ ಅಗ್ನಿವೀರ್‌ಗಳು ಹಾಗೂ ಭಾರತೀಯ ಕರಾವಳಿ ಕಾವಲು ಪಡೆಯ ನಾವಿಕರ ಪಾಸಿಂಗ್ ಔಟ್ ಪೆರೇಡ್ ನವೆಂಬರ್ 13ರಂದು ಐಎನ್‌ಎಸ್ ಚಿಲ್ಕಾದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ 3,300ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ತಮ್ಮ ಮೂಲಭೂತ ತರಬೇತಿಯನ್ನು ಪೂರ್ಣಗೊಳಿಸಲಿದ್ದಾರೆ.

ನೌಕಾಪಡೆಯ ಪ್ರಮುಖ ತರಬೇತಿ ಸಂಸ್ಥೆಯ ಇತಿಹಾಸದಲ್ಲೇ ಇದು ಪದವಿ ಪಡೆಯುತ್ತಿರುವ ಅತಿದೊಡ್ಡ ಬ್ಯಾಚ್ ಆಗಿದೆ. ಪ್ರಶಿಕ್ಷಣಾರ್ಥಿಗಳು ಶೈಕ್ಷಣಿಕ ತರಬೇತಿ, ದೈಹಿಕ ಸಾಮರ್ಥ್ಯ, ಈಜು, ಪೆರೇಡ್ ಕವಾಯತು ಮತ್ತು ಹೊರಾಂಗಣ ಚಟುವಟಿಕೆಗಳನ್ನು ಒಳಗೊಂಡ 16 ವಾರಗಳ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಪೆರೇಡ್ ಪರಿಶೀಲನಾ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ. ದಕ್ಷಿಣ ನೌಕಾ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಸಮೀರ್ ಸಕ್ಸೇನಾ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳು, ಚಾಂಪಿಯನ್ ವಿಭಾಗ ಹಾಗೂ ಶ್ರೇಷ್ಠ ಬೋಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಇದೇ ವೇಳೆ ದ್ವಿಭಾಷಾ ತರಬೇತಿ ನಿಯತಕಾಲಿಕೆ ‘ಅಂಕುರ್’ ಅನ್ನು ಬಿಡುಗಡೆ ಮಾಡಲಾಗುತ್ತದೆ.

Related Articles

Comments (0)