ಮಂಗಳೂರು ಬಳಿ ಹೀಗೊಂದು ವಿಶೇಷ ದೀಪಾವಳಿ; ಒಡ್ಡೂರು ಫಾರ್ಮ್ಸ್ ಗೋಶಾಲೆಯಲ್ಲಿ ಸಾಮೂಹಿಕ ಗೋ ಪೂಜೆ, ಯೋಗಾಭ್ಯಾಸ
- by Suddi Loka
- November 10, 2026
- 3 Views
ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್ಪಿವೈಎಸ್ಎಸ್), ಕರ್ನಾಟಕ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪೊಳಲಿ ಸಮೀಪದ ಗಂಜಿಮಠದ ಒಡ್ಡೂರು ಫಾರ್ಮ್ಸ್ ಗೋಶಾಲೆಯಲ್ಲಿ ಸಾಮೂಹಿಕ ಗೋ ಪೂಜೆ, ಕರ್ಣವೇಧ, ಮೂಗುತಿ ಧಾರಣೆ ಹಾಗೂ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು.
ನವೆಂಬರ್ 10ರಂದು ಬೆಳಗಿನ ಜಾವ 4.45ರಿಂದ 7 ಗಂಟೆಯವರೆಗೆ ನಡೆದ ಕಾರ್ಯಕ್ರಮಕ್ಕೆ ನಗರದ ಸಂಚಾಲಕರಾದ ಕುಮಾರ್ ಕೈಕಂಬ, ಸ್ಮಿತಾ ಕಡೆಗುಂಡ್ಯ, ರಾಜೇಶ್ವರಿ ಪೊಳಲಿ, ಸುಜಾತಾ ಕೈಕಂಬ ಹಾಗೂ ಪುರೋಹಿತ ದೀಪಕ್ ಶರ್ಮ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಜನೆ, ಅಮೃತವಚನ, ಪಂಚಾಂಗ ವಾಚನ ಹಾಗೂ ಸಾಮೂಹಿಕ ಯೋಗಾಭ್ಯಾಸ ನಡೆಯಿತು. ಯೋಗ ಶಿಕ್ಷಕರಾದ ಮನೋಜ್, ಭರತ್, ನಯನ ಕುಕ್ಕಟ್ಟೆ, ಜ್ಯೋತಿ ಪ್ರದೀಪ್ ಅಡ್ಡೂರು ಮತ್ತು ಪ್ರಶಾಂತ್ ಕುಕ್ಕಟ್ಟೆ ಅವರು ಗಣಪತಿ ನಮಸ್ಕಾರ ಹಾಗೂ ವಿಷ್ಣು ನಮಸ್ಕಾರವನ್ನು ನಡೆಸಿಕೊಟ್ಟರು. ಜಗದೀಶ್, ಭವಿತಾ, ಜಗನ್ನಾಥ ಮತ್ತು ಚೇತನ ಯೋಗಾಭ್ಯಾಸದ ಪ್ರಾತ್ಯಕ್ಷಿಕೆ ನೀಡಿದರು.
ದೀಪಾವಳಿ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಗೋ ಪೂಜೆಯ ಮಹತ್ವ ಮತ್ತು ಗೋ ಸಂರಕ್ಷಣೆಯಿಂದ ಮಾನವ ಸಮಾಜ ಹಾಗೂ ಪ್ರಕೃತಿಗೆ ಆಗುವ ಪ್ರಯೋಜನಗಳ ಕುರಿತು ಶಿಕ್ಷಕಿ ವಿದ್ಯಾ ಶಿವಪ್ರಸಾದ್ ಪೊಳಲಿ ಮಾಹಿತಿ ನೀಡಿದರು.

ಪುರೋಹಿತ ದೀಪಕ್ ಶರ್ಮ ಅವರ ನೇತೃತ್ವದಲ್ಲಿ ಲಕ್ಷ್ಮೀ ಪೂಜೆ ಮತ್ತು ಕಲಶ ಪೂಜೆ ನೆರವೇರಿದ ಬಳಿಕ ದುರ್ಗಾಪ್ರಸಾದ್ ಹಾಗೂ ಸ್ಮಿತಾ ಕಡೆಗುಂಡ್ಯ ದಂಪತಿಯ ಸಹಕಾರದಲ್ಲಿ ಗೋ ಪೂಜೆ ನಡೆಯಿತು. ವಿಶ್ವಕರ್ಮ ಸೀತಾರಾಮ ಆಚಾರ್ಯ ಅವರು ಕರ್ಣವೇಧ ಮತ್ತು ಮೂಗುತಿ ಧಾರಣೆ ನೆರವೇರಿಸಿದರು. ಅಗ್ನಿಹೋತ್ರವನ್ನು ಭೋಜ್ ಮತ್ತು ಸುಜಾತಾ ಅಡ್ಡೂರು ದಂಪತಿ ನಡೆಸಿಕೊಟ್ಟರು.

ಪೊಳಲಿ, ಕೈಕಂಬ, ಕಾಜಿಲ, ಬೆಂಜನಪದವು, ಮಟ್ಟಿ, ಕುಕ್ಕಟ್ಟೆ, ಕಂದಾವರ, ಅಶ್ವತ್ಥಪುರ, ಮಿಜಾರು, ಶಾಸ್ತಾವು, ಕಡೆಗುಂಡ್ಯ, ಕುಪ್ಪೆಪದವು, ಕುಕ್ಕಿಪಾಡಿ, ಸಿದ್ದಕಟ್ಟೆ, ರಾಯಿ, ಅಂದ್ರಳಿಕೆ, ಆರಂಬೋಡಿ, ಅರಳ ಹಾಗೂ ಸುವರ್ಣನಾಡು ಸೇರಿದಂತೆ ವಿವಿಧ ಶಾಖೆಗಳಿಂದ ಸುಮಾರು 250 ಯೋಗಬಂಧುಗಳು ಭಾಗವಹಿಸಿದ್ದರು.
ಜನಾರ್ದನ ಪೆರರಾ, ನಿತಿನ್ ಅರಳ, ಕೇಶವ ಕಾವೇರಿ, ಮೋಹನದಾಸ್ ಪೊಳಲಿ, ಸುರೇಂದ್ರ ಸಿದ್ದಕಟ್ಟೆ, ಶಶಿಕಲಾ ಕುಕ್ಕಿಪಾಡಿ, ಅರುಣ್ ಆರಂಬೋಡಿ ಮತ್ತು ಯಶವಂತ ಸಿದ್ದಕಟ್ಟೆ ಉಪಸ್ಥಿತರಿದ್ದರು. ಯಶವಂತಿ ಬೆಂಜನಪದವು ವಂದಿಸಿದರು. ಸಂಧ್ಯಾ ಅಡ್ಡೂರು ಕಾರ್ಯಕ್ರಮ ನಿರೂಪಿಸಿದರು.


Comments (0)