ಎಲ್.ಕೆ. ಅಡ್ವಾಣಿ 100ನೇ ವರ್ಷಕ್ಕೆ ಪಾದಾರ್ಪಣೆ; ರಾಜಕೀಯ ಗುರುವಿನ ರಾಜಕೀಯ ಕೊಡುಗೆ, ರಾಷ್ಟ್ರಸೇವೆ ಮತ್ತು ಸೈದ್ಧಾಂತಿಕ ಬದ್ಧತೆ ಸ್ಮರಿಸಿದ ಪ್ರಧಾನಿ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಪಕ್ಷದ ಮಾರ್ಗದರ್ಶಕ ಎಲ್.ಕೆ. ಅಡ್ವಾಣಿ ಅವರು ನವೆಂಬರ್ 8ರಂದು ತಮ್ಮ 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿ, ದೇಶದ ರಾಜಕೀಯ ಮತ್ತು ಸಾರ್ವಜನಿಕ ಜೀವನಕ್ಕೆ ಅಡ್ವಾಣಿ ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ.

ಅಡ್ವಾಣಿ ಅವರು ‘ರಾಷ್ಟ್ರ ಮೊದಲು’ ಎಂಬ ತತ್ವದ ಮೇಲೆ ಪಕ್ಷಕ್ಕೆ ಬಲವಾದ ಸೈದ್ಧಾಂತಿಕ ಅಡಿಪಾಯ ಹಾಕಿದ್ದಾರೆ. ಹಲವು ತಲೆಮಾರುಗಳ ಕಾರ್ಯಕರ್ತರನ್ನು ರೂಪಿಸಿ, ಬಿಜೆಪಿಯನ್ನು ರಾಷ್ಟ್ರಮಟ್ಟದ ಪ್ರಬಲ ಪಕ್ಷವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1927ರ ನವೆಂಬರ್ 8ರಂದು ಕರಾಚಿಯಲ್ಲಿ ಜನಿಸಿದ ಅಡ್ವಾಣಿ, ದೇಶ ವಿಭಜನೆಯ ಸಂದರ್ಭದಲ್ಲಿ ಭಾರತಕ್ಕೆ ವಲಸೆ ಬಂದರು. 14ನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್‌ಗೆ ಸೇರಿದ ಅವರು, ಜನಸಂಘದ ಬೆಳವಣಿಗೆ ಮತ್ತು 1980ರಲ್ಲಿ ಬಿಜೆಪಿ ಸ್ಥಾಪನೆಯಾದ ಬಳಿಕ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

1975ರ ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಪರವಾಗಿ ಹೋರಾಡಿದ ಅವರು, 1990ರಲ್ಲಿ ಸೋಮನಾಥದಿಂದ ಅಯೋಧ್ಯೆಯವರೆಗೆ ರಾಮ ರಥಯಾತ್ರೆ ನಡೆಸಿದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಗೃಹ ಸಚಿವರಾಗಿ ಹಾಗೂ 2002ರಿಂದ 2004ರವರೆಗೆ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು.

Today, 8th November, is a landmark day. Respected L.K. Advani Ji enters his hundredth year. On this special occasion, my greetings to him.

I’ve written an article in which I’ve highlighted his everlasting contribution to India.

I have recalled his journey, be it experiencing the horrors of Partition and rebuilding life from scratch, strengthening the Jana Sangh and building the BJP, standing up for democracy during the Emergency, leading the Somnath to Ayodhya Rath Yatra or serving the nation in government.

Have also written about other aspects of Advani Ji – the voracious reader, his love for culture and cinema, a prolific writer and more.

English – https://t.co/tc77ZVhRdo

हिंदी – https://t.co/t0JSavOopX

— Narendra Modi (@narendramodi) November 8, 2026

2024ರಲ್ಲಿ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿಗೆ ಭಾಜನರಾದರು. ಅಡ್ವಾಣಿ ಅವರೊಂದಿಗೆ ರಾಮ ರಥಯಾತ್ರೆಯ ಯೋಜನೆ ಮತ್ತು ಅನುಷ್ಠಾನದಲ್ಲಿ ಕೆಲಸ ಮಾಡಿದ ಅನುಭವವನ್ನು ಮೋದಿ ತಮ್ಮ ಲೇಖನದಲ್ಲಿ ನೆನಪಿಸಿಕೊಂಡಿದ್ದಾರೆ.

ಅಡ್ವಾಣಿ ಅವರ ಓದುವಿಕೆ, ಬರವಣಿಗೆ, ಸಿನಿಮಾ ಮತ್ತು ರಂಗಭೂಮಿಯ ಆಸಕ್ತಿಗಳನ್ನೂ ಸ್ಮರಿಸಿರುವ ಮೋದಿ, ಅವರ ಪತ್ನಿ ಕಮಲಾ ಅಡ್ವಾಣಿ ಅವರ ಬೆಂಬಲವನ್ನು ಉಲ್ಲೇಖಿಸಿದ್ದಾರೆ. ಅಡ್ವಾಣಿ ಅವರು ಉತ್ತಮ ಆರೋಗ್ಯದಿಂದ ಇರಲಿ ಹಾಗೂ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದ್ದಾರೆ.

Related Articles

Comments (0)