ದೀಪಾವಳಿಯನ್ನು ‘ಸಂತಸದ ಈದ್’ ಎಂದ ಖರ್ಗೆಗೆ ಬಿಜೆಪಿ ತರಾಟೆ; ಕಾಂಗ್ರೆಸ್ ಸಮರ್ಥನೆ
- by Suddi Loka
- November 9, 2026
- 171 Views
ನವದೆಹಲಿ: ದೀಪಾವಳಿ ಹಬ್ಬದ ಶುಭಾಶಯದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಸಿದ ‘ಸಂತಸದ ಈದ್’ ಪದಪ್ರಯೋಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ದೀಪಾವಳಿ ಸಂತೋಷ, ಶಾಂತಿ ಮತ್ತು ಸಾಮರಸ್ಯದ ಹಬ್ಬ. ಎಲ್ಲ ಸಮುದಾಯಗಳ ಹಬ್ಬಗಳು ಜನರನ್ನು ಒಗ್ಗೂಡಿಸುತ್ತವೆ. ಸಾಮಾಜಿಕ ವಿಭಜನೆಯನ್ನು ತೊಡೆದು ರಾಷ್ಟ್ರೀಯ ಏಕತೆಯನ್ನು ಬಲಪಡಿಸಬೇಕು ಎಂದು ಖರ್ಗೆ ಕರೆ ನೀಡಿದ್ದರು.
ಖರ್ಗೆ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದು, ಕೋಮು ಸೌಹಾರ್ದದ ಸಂದೇಶ ಸಾರುವ ಉದ್ದೇಶದಿಂದ ಈದ್ ಪದ ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಓಲೈಕೆ ಮತ್ತು ಮತಬ್ಯಾಂಕ್ ರಾಜಕಾರಣ ಎಂದು ಟೀಕಿಸಿದ್ದಾರೆ. ಹಿಂದೂ ಹಬ್ಬವನ್ನು ಇಸ್ಲಾಮಿಕ್ ಹಬ್ಬದೊಂದಿಗೆ ಬೆರೆಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿಯನ್ನು ‘ಹೊಸ ಭಾರತದ ಮಿರ್ ಜಾಫರ್’ ಎಂದು ಟೀಕಿಸಿದ್ದಾರೆ.
ಖರ್ಗೆ ಹೇಳಿಕೆ ಸಾಮಾಜಿಕ ಜಾಲತಾಣಗಳು ಮತ್ತು ರಾಜಕೀಯ ವಲಯದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.


Comments (0)