“ಯುವಕರೇ ನಿಮಗೆ ಧನ್ಯವಾದಗಳು”: ಮೊದಲ ಸೆಲ್ಫಿ ವಿಡಿಯೋ ವೈರಲ್ ಬೆನ್ನಲ್ಲೇ ಮೋದಿ ಮತ್ತೊಂದು ಪೋಸ್ಟ್!

ನವದೆಹಲಿ: ನೀಟ್ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ದೇಶದ ಯುವ ಸಮುದಾಯವನ್ನು ಉದ್ದೇಶಿಸಿ ಮಧ್ಯರಾತ್ರಿ ನಡೆಸಿದ್ದ ‘ಸೆಲ್ಫಿ ವೀಡಿಯೋ’ ಭಾರಿ ಯಶಸ್ಸು ಕಂಡ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು 24 ಗಂಟೆಗಳ ಒಳಗಾಗಿ ಎರಡನೇ ವೀಡಿಯೋ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಹೊಸ ಪೋಸ್ಟ್‌ನಲ್ಲಿ ಅವರು ತಮ್ಮ ವೀಡಿಯೋ ವೀಕ್ಷಿಸಿ, ಅಮೂಲ್ಯವಾದ ಸಲಹೆಗಳನ್ನು ನೀಡಿದ ದೇಶದ ಲಕ್ಷಾಂತರ ಯುವಕರಿಗೆ ನೇರವಾಗಿ ಧನ್ಯವಾದ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಪೋಸ್ಟ್ ಸಂದೇಶ:

“ನಿನ್ನೆ ನನ್ನ ವಿಡಿಯೋವನ್ನು ವೀಕ್ಷಿಸಿದ ಮತ್ತು ಅತ್ಯಂತ ಆಳವಾದ ಹಾಗೂ ಒಳನೋಟವುಳ್ಳ ಸಲಹೆಗಳನ್ನು ಕಳುಹಿಸಿದ ಯುವಕರಿಗೆ ಧನ್ಯವಾದಗಳು.” (Thanks to the youngsters who watched my video yesterday and sent insightful suggestions)

ಸಚಿವರಿಗೂ ಇನ್‌ಸ್ಟಾಗ್ರಾಮ್ ಪಾಠ ಮಾಡಿದ ಮೋದಿ!

ಕೇವಲ ಯುವಕರಿಗೆ ಧನ್ಯವಾದ ಹೇಳುವುದಷ್ಟೇ ಅಲ್ಲದೆ, ಪ್ರಧಾನಿ ಮೋದಿ ಅವರು ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಸಹೋದ್ಯೋಗಿ ಸಚಿವರಿಗೂ ಡಿಜಿಟಲ್ ಪಾಠ ಮಾಡಿದ್ದಾರೆ.

ರೀಲ್ಸ್ ಮಾಡಲು ಸೂಚನೆ: ದೇಶದ ಬಹುಪಾಲು ಯುವ ಪೀಳಿಗೆ (Gen Z) ಸದ್ಯ ಇನ್‌ಸ್ಟಾಗ್ರಾಮ್‌ನಲ್ಲೇ ಸಕ್ರಿಯವಾಗಿದೆ. ಆದ್ದರಿಂದ ಸಾಂಪ್ರದಾಯಿಕ ಪ್ರಕಟಣೆಗಳನ್ನು ಬಿಟ್ಟು, ಯುವಕರಿಗೆ ಅರ್ಥವಾಗುವ ಭಾಷೆಯಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಹಾಗೂ ಇಂಟರಾಕ್ಟಿವ್ ಸೆಷನ್‌ಗಳ ಮೂಲಕ ಅವರೊಂದಿಗೆ ಸಂಪರ್ಕದಲ್ಲಿರಿ ಎಂದು ಸಚಿವರಿಗೆ ಮೋದಿ ಕಡಕ್ ಸೂಚನೆ ನೀಡಿದ್ದಾರೆ.

ಮೊದಲ ವೀಡಿಯೋ ಸೃಷ್ಟಿಸಿದ ಹೊಸ ಇತಿಹಾಸ

ಗುರುವಾರ ತಡರಾತ್ರಿ ಮೋದಿ ಹಂಚಿಕೊಂಡಿದ್ದ ಮೊದಲ ಸೆಲ್ಫಿ ವಿಡಿಯೋ ಇಂಟರ್ನೆಟ್‌ನಲ್ಲಿ ಸುನಾಮಿ ಎಬ್ಬಿಸಿದೆ. ಕೇವಲ 24 ಗಂಟೆಗಳಲ್ಲಿ 27 ಕೋಟಿಗೂ ಅಧಿಕ ವೀಕ್ಷಣೆ (Views) ಹಾಗೂ 1.5 ಕೋಟಿಗೂ ಹೆಚ್ಚು ಲೈಕ್ಸ್ ಪಡೆದುಕೊಂಡಿರುವ ಈ ವೀಡಿಯೋ, ಇನ್‌ಸ್ಟಾಗ್ರಾಮ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ವೈರಲ್ ಆದ ರಾಜಕೀಯ ನಾಯಕರೊಬ್ಬರ ವೀಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

 

Related Articles

Comments (0)

Leave a Comment