ಯೆಮೆನ್‌ನಲ್ಲಿ ವೈಮಾನಿಕ ದಾಳಿ: 11 ಮಂದಿ ಸಾವು

ಸನಾ: ಯೆಮೆನ್ ರಾಜಧಾನಿ ಸನಾ ಸಮೀಪದ ಅಶ್ ಶರ್ಯಾ ಗ್ರಾಮದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಐದು ಮನೆಗಳು ಧ್ವಂಸಗೊಂಡಿದ್ದು, ಮಹಿಳೆಯರು ಮತ್ತು ಮಕ್ಕಳು ಬಲಿಯಾಗಿದ್ದಾರೆ ಎಂದು ಹೌತಿ ಮೂಲಗಳು ತಿಳಿಸಿವೆ.

ಸೌದಿ ಯುದ್ಧವಿಮಾನಗಳು ದಾಳಿ ನಡೆಸಿವೆ ಎಂದು ಹೌತಿಗಳು ಆರೋಪಿಸಿದ್ದು, ಅವಶೇಷಗಳಡಿಯಿಂದ 11 ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಇದೇ ವೇಳೆ, ಸೌದಿ ಪ್ರದೇಶದತ್ತ ಬಂದ ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಒಕ್ಕೂಟ ತಿಳಿಸಿದೆ. ಸೌದಿಯ ವಿಮಾನ ನಿಲ್ದಾಣ ಮತ್ತು ವಾಯುನೆಲೆಗಳ ಮೇಲೆ ಡ್ರೋನ್ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿಕೊಂಡಿದ್ದಾರೆ. ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

Related Articles

Comments (0)