ಬಾಲಕೃಷ್ಣ ‘ದಾದಾ’ ಚಿತ್ರದ ಮೊದಲ ಹಾಡು ‘ದಾದಾ ಧಮಾಕಾ’ ಬಿಡುಗಡೆ
- by Suddi Loka
- November 14, 2026
- 5 Views
ಹೈದರಾಬಾದ್: ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ‘ದಾದಾ’ ಚಿತ್ರದ ಮೊದಲ ಹಾಡು ‘ದಾದಾ ಧಮಾಕಾ’ ಬಿಡುಗಡೆಯಾಗಿದೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ಆ್ಯಕ್ಷನ್ ಎಂಟರ್ಟೈನರ್ ಚಿತ್ರದ ಹಾಡಿನಲ್ಲಿ ಬಾಲಕೃಷ್ಣ ಮತ್ತು ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಎಸ್. ತಮನ್ ಸಂಗೀತ ಸಂಯೋಜಿಸಿರುವ ಹಾಡಿಗೆ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿದ್ದು, ರಾಜಿನಿ ಶ್ರೀ ಪೂರ್ಣಿಮಾ ಧ್ವನಿಯಾಗಿದ್ದಾರೆ. ಹಾಡಿನ ಒಂದು ಭಾಗವನ್ನು ಬಾಲಕೃಷ್ಣ ಕೂಡ ಹಾಡಿದ್ದಾರೆ. ಶೇಖರ್ ವಿಜೆ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.

ವೃದ್ಧಿ ಸಿನಿಮಾಸ್ ಬ್ಯಾನರ್ನಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸುತ್ತಿರುವ ಚಿತ್ರದಲ್ಲಿ ಮನೋಜ್ ಮಂಚು ಮತ್ತು ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗಾಯದ ಚಿಕಿತ್ಸೆಯ ಬಳಿಕ ಬಾಲಕೃಷ್ಣ ಚಿತ್ರೀಕರಣಕ್ಕೆ ಮರಳಿದ್ದಾರೆ. ಚಿತ್ರತಂಡದ ಮಾಹಿತಿ ಪ್ರಕಾರ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಡಿಸೆಂಬರ್ 24ರಂದು ಕ್ರಿಸ್ಮಸ್ ಪ್ರಯುಕ್ತ ಚಿತ್ರ ಬಿಡುಗಡೆಯಾಗಲಿದೆ.


Comments (0)