Kannada film ‘Maarige Daari’, directed by Agastya
- by Suddi Loka
- November 13, 2026
- 7 Views
ಬೆಂಗಳೂರು: ಅಗಸ್ತ್ಯ ನಿರ್ದೇಶನದ ಕನ್ನಡ ಸಿನಿಮಾ ‘ಮಾರಿಗೇ ದಾರಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರಾಧಾ ಫಿಲ್ಮ್ಸ್ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.
ಚಿತ್ರದಲ್ಲಿ ಅಗಸ್ತ್ಯ, ಮಹಾಲಕ್ಷ್ಮಿ, ಕಾಕ್ರೋಚ್ ಸುಧಿ, ವರ್ಧನ್, ಪ್ರದೀಪ್ ಪೂಜಾರಿ, ಟ್ಯಾಟೂ ಘೋಸ್ಟ್, ನವಾಜ್, ಬಾಲರಾಜವಾಡಿ, ಅಂಕಿತಾ, ಗಗನ, ಸಂತೋಷ್, ಅನಂತ್ ಕುಮಾರ್ ಹಾಗೂ ತಾರಕ್ ರಾಮ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಅಗಸ್ತ್ಯ ನಿರ್ವಹಿಸಿದ್ದಾರೆ. ರಾಧಾ ನಿರ್ಮಾಪಕರಾಗಿದ್ದು, ಜಗದೀಶ್ ಗೌಡ ಛಾಯಾಗ್ರಹಣ ಹಾಗೂ ಸಂಕಲನದ ಹೊಣೆ ಹೊತ್ತಿದ್ದಾರೆ. ರಿಯೋ ಆಂಟೋನಿ ಸಂಗೀತ ಸಂಯೋಜಿಸಿದ್ದಾರೆ.

ಸೈಕ್ ಸೂರಿ ಮತ್ತು ಅಗಸ್ತ್ಯ ಸಾಹಸ ನಿರ್ದೇಶನ ಮಾಡಿದ್ದಾರೆ. ಕಿನ್ನಾಳ್ ರಾಜ್, ಪ್ರಮೋದ್ ಮರಾವಂತೆ ಹಾಗೂ ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ವಿಜಯಲಕ್ಷ್ಮಿ ಮೆಟ್ಟಿನಹೊಳೆ, ರಿಯೋ ಆಂಟೋನಿ ಮತ್ತು ಮೈತ್ರಿ ಜಗ್ಗಿ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಚಿತ್ರದ ತಾಂತ್ರಿಕ ವಿಭಾಗದಲ್ಲಿ ಬೇಬಿಚೆನ್ ಪಾಲ್ ಧ್ವನಿ ವಿನ್ಯಾಸ, ಫ್ಯೂಚರ್ ಏಜ್ ಸ್ಟುಡಿಯೋ ವಿಎಫ್ಎಕ್ಸ್ ಹಾಗೂ ರೋಡ್ಸೈಡ್ ವಿಲೇಜ್ ಪ್ರಚಾರ ವಿನ್ಯಾಸ ನಿರ್ವಹಿಸಿವೆ.


Comments (0)