ಸಾರಿಗೆ ಸಮರ: ‘ನಾಲಾಯಕ್ ವಿರೋಧ ಪಕ್ಷದ ನಾಯಕ’ – ಕಾಂಗ್ರೆಸ್ನಿಂದ ಚಲವಾದಿ ನಾರಾಯಣಸ್ವಾಮಿಗೆ ತೀಕ್ಷ್ಣ ತಿರುಗೇಟು
- by Suddi Team
- February 11, 2026
- 10 Views
ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿ ಮತ್ತು ‘ಶಕ್ತಿ’ ಯೋಜನೆ ಕುರಿತಾದ ಬಿಜೆಪಿ ನಾಯಕರ ಟ್ವೀಟ್ಗೆ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ಸಾರಿಗೆ ಇಲಾಖೆಯ ಬಗ್ಗೆ ಮಾಡಿರುವ ಟೀಕೆಗಳಿಗೆ ಅಂಕಿ-ಅಂಶಗಳ ಸಮೇತ ಉತ್ತರ ನೀಡಿರುವ ಕಾಂಗ್ರೆಸ್, “ನೀವು ಆ ಸ್ಥಾನದಲ್ಲಿ ಕೂರಲು ನಾಲಾಯಕ್” ಎಂದು ಹರಿಹಾಯ್ದಿದೆ.
“ವಿರೋಧ ಪಕ್ಷದ ನಾಯಕರು ಟೀಕೆ ಮಾಡುವ ಮೊದಲು ವಿಷಯದ ಬಗ್ಗೆ ಸಮಗ್ರ ಅಧ್ಯಯನ ಮಾಡಬೇಕು. ಮಹಿಳಾ ಸಬಲೀಕರಣದ ಶಕ್ತಿ ಯೋಜನೆಯಿಂದ ನಿಗಮಗಳ ಶಕ್ತಿ ಕುಂದಿದೆ ಎಂಬ ನಿಮ್ಮ ವಾದ ಹಾಸ್ಯಸ್ಪದ” ಎಂದು ಕಾಂಗ್ರೆಸ್ ಕಿಡಿಕಾರಿದೆ. ಅಸೂಯೆಯಿಂದ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಎಕ್ಸ್( ಟ್ವೀಟ್) ಮೂಲಕ ದೂಷಿಸಿದೆ.
ಛಲವಾದಿ ನಾರಾಯಣಸ್ವಾಮಿ ಅವರೇ ನಿಮ್ಮ ಅಧ್ಯಯನದ ಕೊರತೆ ನಾವು ನೀಗಿಸುತ್ತೇವೆ.ತಮ್ಮ ಅವಧಿಯಲ್ಲಿ ಶಕ್ತಿ ಯೋಜನೆಯೇ ಇರಲಿಲ್ಲ, ಮತ್ತೆ ಏಕೆ 2023 ರಲ್ಲಿ ರೂ 5900 ಕೋಟಿ ಸಾಲ ಬಿಟ್ಟು ಹೋಗಿದ್ದೀರಾ? ಎಂದು ಪ್ರಶ್ನಿಸಿದೆ.
ಬಿಜೆಪಿ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳಶೋಚನೀಯ ಸ್ಥಿತಿ ಹೇಗಿತ್ತು ಎಂಬುದನ್ನು ಮೆಲುಕು ಹಾಕಿ ಎಂದು ಅಂಕಿ ಅಂಶದ ವಿವರ ನೀಡಿದೆ.
❌ಹೊಸ ಬಸ್ಸುಗಳ ಸೇರ್ಪಡೆ ಇಲ್ಲ
❌️ಶೂನ್ಯ ನೇಮಕಾತಿ,
❌️ಡೀಸೆಲ್ ಹಣ ಬಾಕಿ,
❌️ನೌಕರರ ಭವಿಷ್ಯ ನಿಧಿ ಹಣ ಬಾಕಿ,
❌️ಬಿಡಿ ಭಾಗಗಳ ಹಣ ಬಾಕಿ,
❌️ನೌಕರರಿಗೆ ಅರ್ಧ ವೇತನ, ಈ ತಿಂಗಳ ವೇತನ ಮುಂದಿನ ತಿಂಗಳು ಪಾವತಿ,
❌️ನಿವೃತ್ತ ನೌಕರರ ಉಪಧನ , ಭವಿಷ್ಯ ನಿಧಿ, ಗಳಿಕೆ ರಜೆ ವರ್ಷಾನುಗಟ್ಟಲೆ ಬಾಕಿ
❌️ವೇತನ ಹೆಚ್ಚಳ ಬಾಕಿ
❌️ಹತ್ತಾರು ವರ್ಷಗಳಿಂದ ಮೃತ ಸಿಬ್ಬಂದಿಗಳ ಅವಲಂಬಿತರು ನೌಕರಿಗಾಗಿ ಕಾಯುವಂತೆ ಮಾಡಿದಿರಿ.
❌️ಸಾರಿಗೆ ಸಂಸ್ಥೆಗಳ ಇತಿಹಾದಲ್ಲಿಯೇ ಸುದೀರ್ಘ 15 ದಿವಸಗಳ ಮುಷ್ಕರ ನಡೆಸಿದ ಕೀರ್ತಿ ನಿಮ್ಮದು
❌️ಮುಷ್ಕರದ ಹೆಸರಿನಲ್ಲಿ 3000 ಕ್ಕೂ ಹೆಚ್ಚು ಅಮಾಯಕ ನೌಕರರ ವಜಾ/ ಅಮಾನತು ಶಿಕ್ಷೆ. ಇಂದಿಗೂ ನೌಕರರು ಕೋರ್ಟ್ ಕಛೇರಿ ಅಲೆಯುತ್ತಿದ್ದಾರೆ.
ಇವಿಷ್ಟೂ ನಿಮ್ಮ ವೈಫಲ್ಯಗಳ ಪಟ್ಟಿ, ನಮ್ಮ ಸರ್ಕಾರ ಎರಡೂವರೆ ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ನೋಡಿ.
✅7800 ಹೊಸ ಬಸ್ಸುಗಳನ್ನು ಸೇರ್ಪಡೆ,
✅10000 ನೇಮಕಾತಿ,
✅ 1200 ಅನುಕಂಪದ ನೌಕರಿ
✅ 2400 ಕ್ಕೂ ಹೆಚ್ಚು ಬಸ್ಸುಗಳ ಪುನಶ್ಚೇತನ ಕಾರ್ಯ
✅ ಡೀಸೆಲ್ ಮತ್ತು ನೌಕರರ ಭವಿಷ್ಯ ನಿಧಿ ಪಾವತಿಗೆ ರೂ.2000 ಕೋಟಿ ಸಾಲ, ಅದರ ಅಸಲು ಮತ್ತು ಬಡ್ಡಿಯನ್ನು ಸರ್ಕಾರ ಪಾವತಿಸುತ್ತಿದೆ.
✅ನಿವೃತ್ತ ನೌಕರರ ವೇತನ ಹೆಚ್ಚಳ ವ್ಯತ್ಯಾಸ ಮೊತ್ತ ಪಾವತಿಗೆ ರೂ.224 ಕೋಟಿ ಬಿಡುಗಡೆ
✅ ಶಕ್ತಿ ಯೋಜನೆಯಡಿಯಲ್ಲಿ 4 ನಿಗಮಗಳಿಗೆ ಇಲ್ಲಿಯವರೆಗೆ ರೂ. 12632.10 ಕೋಟಿ ಪಾವತಿ ಮಾಡಿದ್ದೇವೆ.
“ಸಾರಿಗೆ ಸಂಸ್ಥೆಗಳನ್ನು ಸರ್ವನಾಶ ಮಾಡಿ ಹೋಗಿದ್ದ ನಿಮಗೆ ಈಗ ಅದನ್ನು ಉಳಿಸುವ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.ಇನ್ನು ಮುಂದೆಯಾದರೂ ಸರಿಯಾಗಿ ಸಂಪೂರ್ಣ ವಿಷಯ ತಿಳಿದು ಸರ್ಕಾರದ ವಿರುದ್ಧ ಟೀಕೆ ಮಾಡಿ. ಇಲ್ಲದಿದ್ದರೆ ಈ ರೀತಿ ನಮ್ಮ ಕೈಗೆ ಕೋಲು ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ತಪ್ಪಲ್ಲ ಎಂದು ಎಚ್ಚರಿಕೆ ನೀಡಿದೆ.
Related Articles
Thank you for your comment. It is awaiting moderation.


Comments (0)