ಆಟೋ-ಟ್ಯಾಕ್ಸಿಗಳಿಗೆ ‘ಭಾರತ್ ಟ್ಯಾಕ್ಸಿ’ ಯೋಜನೆ ಜಾರಿಗೆ ತರಲು ಸಾರಿಗೆ ಸಚಿವರಿಗೆ ಒಕ್ಕೂಟದ ಮನವಿ
- by Suddi Team
- February 10, 2026
- 102 Views
ಬೆಂಗಳೂರು: ರಾಜ್ಯದಲ್ಲಿ ಚಾಲಕ ಸ್ನೇಹಿ “ಭಾರತ್ ಟ್ಯಾಕ್ಸಿ” ಯೋಜನೆಯನ್ನು ಕೂಡಲೇ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ನಟರಾಜ್ ಶರ್ಮಾ ಅವರ ನೇತೃತ್ವದ ನಿಯೋಗವು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದು, ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಖಾಸಗಿ ಅಗ್ರಿಗೇಟರ್ಗಳಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಕಷ್ಟ ಅನುಭವಿಸುತ್ತಿರುವುದರಿಂದ ಕೇಂದ್ರ ಸರ್ಕಾರವು “ಭಾರತ್ ಟ್ಯಾಕ್ಸಿ” ಯೋಜನೆಯನ್ನು ಪ್ರಾರಂಭಿಸಿದ್ದು, ರಾಜ್ಯದಲ್ಲಿ ಈ ಯೋಜನೆಯನ್ನು ವಾಹನ್ ಪೋರ್ಟಲ್ ಮೂಲಕ ತರಬೇಕೆಂದು, ಅಗ್ರಿಗೇಟರ್ ವ್ಯವಸ್ಥೆಯಲ್ಲಿ ಚಾಲಕರಿಂದ ಪ್ರತಿ ಪ್ರಯಾಣಕ್ಕೆ 20% ರಿಂದ 35% ರವರೆಗೆ ಕಮಿಶನ್ ಪಡೆಯುತ್ತಿರುವುದರಿಂದ ಚಾಲಕರಿಗೆ ತೊಂದರೆಯುಂಟಾಗುತ್ತಿರುವುದಾಗಿ, ವಾಹನ-4 ಪೋರ್ಟಲ್ ಯೋಜನೆಯಿಂದ ನೋಂದಣಿ, ಪರವಾನಗಿ, ವಿಮೆ ಸುಲಭವಾಗಿ ಪಾರದರ್ಶಕವಾಗಿ ದೊರೆಯುವಂತಾಗುತ್ತದೆ. ಇದರಿಂದ ಪ್ರಯಾಣಿಕರ ಸುರಕ್ಷತೆ, ಅಪಘಾತ ಅಥವಾ ಅನಾಹುತದ ಸಂದರ್ಭದಲ್ಲಿ ಪರಿಹಾರ ದೊರೆಯುವುದಾಗಿ, (ಆದರೆ ಸದರಿ ಯೋಜನೆಯಲ್ಲಿ ಬೈಕ್ ಟ್ಯಾಕ್ಸಿ/ದ್ವಿಚಕ್ರ ವಾಹನವನ್ನು ಸೇರಿಸಬಾರದೆಂದು) ಸೇರಿಸಿದಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ ಪ್ರಯಾಣಿಕರ ಜೀವಭದ್ರತೆಗೆ ಅಪಾಯ ಉಂಟಾಗುತ್ತಿರುವ ಬಗ್ಗೆ ಪೊಲೀಸ್ ವರದಿಗಳು ಪೂರಕವಾಗಿರುತ್ತವೆಯೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಚಿವರ ಸ್ಪಂದನೆ:
ನಿಯೋಗದ ಅಹವಾಲು ಆಲಿಸಿದ ಸಾರಿಗೆ ಸಚಿವರು, ಈ ಕುರಿತು ಕೇಂದ್ರ ಸಾರಿಗೆ ಸಚಿವಾಲಯದೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Related Articles
Thank you for your comment. It is awaiting moderation.


Comments (0)