ಇತಿಹಾಸದ ವೈಭವಕ್ಕೆ ನೃತ್ಯದ ಮೆರುಗು; ಯಶಸ್ವಿಯಾಗಿ ಮೂಡಿಬಂದ ‘ಪುನರ್ನವ’
- by Suddi Team
- October 31, 2026
- 25 Views
ಬೆಂಗಳೂರು: ಭಾರತದ ಐತಿಹಾಸಿಕ ಚಕ್ರವರ್ತಿಗಳಾದ ರಾಜಾ ರಾಣಾ ಕುಂಭ ಮತ್ತು ರಾಜರಾಜ ಚೋಳರ ಜೀವನಗಾಥೆಯನ್ನು ನೃತ್ಯ ಮತ್ತು ಸಂಗೀತದ ಮೂಲಕ ಪರಿಚಯಿಸುವ ‘ಪುನರ್ನವ’ ವಿಶೇಷ ಕಲಾ ಪ್ರದರ್ಶನವು ಅಕ್ಟೋಬರ್ 31ರಂದು ನಗರದ ಕಲಾ ಸಂಭ್ರಮದಲ್ಲಿ ಯಶಸ್ವಿಯಾಗಿ ನಡೆಯಿತು.
ನವೀನ್ ಆರ್. ಹೆಗಡೆ ಅವರು ಕಥಕ್ ಮತ್ತು ರಂಗಭೂಮಿಯ ಮೂಲಕ ರಾಜಾ ರಾಣಾ ಕುಂಭ ಅವರ ಜೀವನಗಾಥೆಯನ್ನು ಪ್ರಸ್ತುತಪಡಿಸಿದರೆ, ಸಮುಧ್ಯತಾ ಭಟ್ ಅವರು ಭರತನಾಟ್ಯದ ಮೂಲಕ ರಾಜರಾಜ ಚೋಳರ ಆಡಳಿತ ಮತ್ತು ಸಾಧನೆಗಳನ್ನು ವೇದಿಕೆಯಲ್ಲಿ ಅನಾವರಣಗೊಳಿಸಿದರು. ಪಂಡಿತ್ ಸಮೀರ್ ರಾವ್ ಅವರ ಮೂಲ ಸಂಗೀತ ಸಂಯೋಜನೆ ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿತು. ಇತಿಹಾಸಕಾರರಾದ ಡಾ. ಅನುರಾಧಾ ವಿ. ಅವರು ಸಂವಾದ ನಿರ್ವಹಿಸಿದರು.
ಪರಮ್ ಫೌಂಡೇಶನ್‌ನ ಪರಮ್ ಕಲ್ಚರ್ ವತಿಯಿಂದ ಆಯೋಜಿಸಲಾದ ಈ ಉಪಕ್ರಮದಡಿ ಆಯ್ಕೆಯಾದ ಕಲಾವಿದರಿಗೆ ₹2 ಲಕ್ಷ ಪ್ರೋತ್ಸಾಹಧನದ ಜೊತೆಗೆ ವೇದಿಕೆ, ತಾಲೀಮು ಸ್ಥಳ, ಬೆಳಕು ಮತ್ತು ಧ್ವನಿ ಸೇರಿದಂತೆ ಅಗತ್ಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಾಗಿತ್ತು.
ಇತಿಹಾಸ, ನೃತ್ಯ ಮತ್ತು ಸಂಗೀತದ ಸಮ್ಮಿಲನದೊಂದಿಗೆ ಮೂಡಿಬಂದ ‘ಪುನರ್ನವ’ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಜನರಿಗೆ ತಲುಪಿಸುವ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಪರಮ್ ಕಲ್ಚರ್‌ನ ಪ್ರಯತ್ನಕ್ಕೆ ಈ ಕಾರ್ಯಕ್ರಮ ಮತ್ತಷ್ಟು ಬಲ ತುಂಬಿತು.
Related Articles
Thank you for your comment. It is awaiting moderation.


Comments (0)