ದಾಖಲೆ ಬರೆದ ಪ್ರಧಾನಿ ಮೋದಿಗೆ ನಟ ಕಿಚ್ಚ ಸುದೀಪ್ ಸಲಾಂ: 12 ವರ್ಷಗಳ ಬತ್ತದ ಉತ್ಸಾಹಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ ಶ್ಲಾಘನೆ!

ಬೆಂಗಳೂರು:ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ನಿರಂತರವಾಗಿ ಆಯ್ಕೆಯಾದ ಪ್ರಧಾನ ಮಂತ್ರಿ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ನರೇಂದ್ರ ಮೋದಿ ಅವರಿಗೆ ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರ ದಕ್ಷತೆ ಹಾಗೂ ಸಮರ್ಪಣಾ ಮನೋಭಾವವನ್ನು ಸುದೀಪ್ ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಸುದೀಪ್, “ಭಾರತದ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಚುನಾಯಿತರಾದ ಪ್ರಧಾನಿ ನರೇಂದ್ರ ಮೋದಿ ಅವರ ಈ ಸಾಧನೆಯನ್ನು ನಾವೆಲ್ಲರೂ ಒಂದು ಕ್ಷಣ ನಿಂತು ಹೆಮ್ಮೆಯಿಂದ ಒಪ್ಪಿಕೊಳ್ಳಬೇಕು” ಎಂದಿದ್ದಾರೆ. ಮುಂದುವರಿದು, “ಕಳೆದ 12 ವರ್ಷಗಳಿಂದ ಯಾವುದೇ ದಣಿವಿಲ್ಲದೆ, ಅದೇ ಶಕ್ತಿ ಹಾಗೂ ಅದೇ ವೇಗದಲ್ಲಿ ದೇಶ ಮುನ್ನಡೆಸುತ್ತಿರುವ ನಿಮ್ಮ ಸಮರ್ಪಣಾ ಮನೋಭಾವಕ್ಕೆ ನನ್ನ ಹೃದಯಪೂರ್ವಕ ಸಲಾಂ. ಇದು ನಿಜಕ್ಕೂ ಹೆಮ್ಮೆಯ ಕ್ಷಣ” ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸತತವಾಗಿ 4,399 ದಿನಗಳ ಕಾಲ ಆಡಳಿತ ನಡೆಸುವ ಮೂಲಕ ಈ ಹಿಂದಿನ ದಾಖಲೆಗಳನ್ನು ಮುರಿದು ನೂತನ ಇತಿಹಾಸ ಸೃಷ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಹಾಗೂ ಜಾಗತಿಕ ಮಟ್ಟದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಸ್ಯಾಂಡಲ್‌ವುಡ್‌ನಿಂದ ಕಿಚ್ಚ ಸುದೀಪ್ ಅವರ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

 

Related Articles

Comments (0)

Leave a Comment