ಕಳೆದ ಬಾರಿಯ ಪ್ರವಾಹದಿಂದ ಸೋಯಾಬಿನ್ ಮೊಳಕೆಯಲ್ಲಿ ವ್ಯತ್ಯಾಸ:ಪರಿಸ್ಥಿತಿ ನೋಡಿಕೊಂಡು ಬಿತ್ತನೆಗೆ ಮುಂದಾಗಲು ಕೃಷಿ ಸಚಿವರ ಕರೆ
- by Suddi Team
- June 8, 2020
- 115 Views
ಹಾವೇರಿ, ಜೂ.8: ಕಳೆದ ವರ್ಷ ಸುರಿದ ಹೆಚ್ಚಿನ ಪ್ರವಾಹದಿಂದಾಗಿ ಈ ವರ್ಷ ಸೋಯಾಬಿನ್ ಬೀಜ ಮೊಳಕೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಈ ಬಾರಿ ಪರಿಸ್ಥಿತಿ ನೋಡಿಕೊಂಡು ಬಿತ್ತನೆಗೆ ಮುಂದಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.
ಸೋಯಾಬಿನ್ ಬಿತ್ತನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸಚಿವರು ಮಾತನಾಡಿದರು.ಸೋಯಾಬಿನ್ ಮೊಳಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವಯವುದು ಕೇವಲ ಕರ್ನಾಟಕದ್ದೇ ಅಷ್ಟೇ ಅಲ್ಲದೇ ದೇಶಾದ್ಯಂತ ಕಂಡುಬಂದಿರುವ ಸಮಸ್ಯೆಯಾಗಿದೆ.ಭಾರತ ಸರ್ಕಾರ ಈ ಮೊದಲು ಶೇ.65ರಷ್ಟು ಬಿತ್ತನೆ ಒಪ್ಪಿಗೆ ಕೊಟ್ಟಿತ್ತು. ಪ್ರವಾಹದಿಂದಾಗಿ ಇದನ್ನು ಕೇಂದ್ರ ಸರ್ಕಾರ ಶೇ.60 ಕ್ಕೆ ಇಳಿಸಿದೆ. ಎಲ್ಲಾ ಕಡೆ ಮೊಳಕೆ ಕಡಿಮೆ ಬಂದಿದೆ. ಬೆಳಗಾವಿ, ಧಾರವಾಡ, ಬೀದರ್, ಗುಲ್ಬರ್ಗಾ, ಹಾವೇರಿ,ಬಾಗಲಕೋಟೆ ಇವು ಸೋಯಾಬಿನ್ ಹೆಚ್ಚು ಸೋಯಾಬಿನ್ ಬಿತ್ತನೆಯಾಗುವ ಜಿಲ್ಲೆಗಳಾಗಿವೆ.ಕಳೆದ ವರ್ಷ ಹೆಚ್ಚು ಪ್ರವಾಹದಿಂದಾಗಿ ಸೋಯಾಬಿನ್ ಬೀಜ ಮಧ್ಯಪ್ರದೇಶ ಮತ್ತು ಆಂದ್ರಪ್ರದೇಶದಿಂದ ಕರ್ನಾಟಕಕ್ಕೆ ಪೂರೈಕೆಯಾಗಿದೆ. ಈ ವರ್ಷ 1,30,214 ಕ್ವಿಂಟಾಲ್ ಬೀಜವನ್ನು ಖರೀದಿಸಲಾಗಿದೆ ಎಂದರು.
ಸಾಧ್ಯವಿದ್ದಲ್ಲಿ ಮೊಳಕೆ ಪ್ರಮಾಣವನ್ನು ಅರಿತುಕೊಂಡು ಎಕರೆಗೆ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಬೀಜಗಳನ್ನು ಬಿತ್ತನೆ ಮಾಡಬಹುದಾಗಿದೆ.ಸೋಯಾಬಿನ್ ಬಿತ್ತನೆ ಸಂಬಂಧ ಶೀಘ್ರದಲ್ಲಿಯೇ ಪ್ರಮುಖರ ಸಭೆ ಕರೆಯಲಾಗುವುದು ಎಂದು ಸಚಿವರು ತಿಳಿಸಿದರು.
Related Articles
Thank you for your comment. It is awaiting moderation.


Comments (0)