ಜೂನ್ 1 ರಿಂದ ಭಕ್ತರಿಗೆ ದರ್ಶನ ನೀಡಲಿರುವ ಧರ್ಮಸ್ಥಳ ಮಂಜುನಾಥೇಶ್ವರ
- by Suddi Team
- May 27, 2020
- 167 Views
ಧರ್ಮಸ್ಥಳ: ಕೋವಿಡ್-19 ಲಾಕ್ಡೌನ್ ನಿಂದ ಮುಚ್ಚಲ್ಪಟ್ಟಿರುವ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ ಜೂನ್ 1 ಕ್ಕೆ ತೆರೆಯಲಿದ್ದು ಭಕ್ತರ ಪ್ರವೇಶ ಅವಕಾಶ ನೀಡುವುದಾಗಿ ಪ್ರಕಟಿಸಿದೆ.
ಸರ್ಕಾರ ಜೂನ್ 1 ರಿಂದ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿದ್ದು ಅದರಂತೆ ಧರ್ಮಸ್ಥಳ ಕ್ಷೇತ್ರದ ಮಂಜುನಾಥೇಶ್ವರ ಸ್ವಾಮಿಯ ದೇವಸ್ಥಾನ ಕೂಡ ತೆರೆಯಲಿದೆ, ಸರ್ಕಾರದ ಸೂಚನೆಯಂತೆ ಸ್ಯಾನಿಟೈಸರ್, ಮಾಸ್ಕ್,ಸಾಮಾಜಿಕ ಅಂತರ ಪಾಲಿಸಿಕೊಂಡು ಪ್ರತಿಯೊಬ್ಬ ಭಕ್ತರ ಥರ್ಮಲ್ ಸ್ಕ್ರೀನಿಂಗ್ ಮಾಡಿಯೇ ದೇವಾಲಯ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ ಭಕ್ತರ ಧರ್ಮಸ್ಥಳಕ್ಕೆ ಬರಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳ ಕಚೇರಿ ತಿಳಿಸಿದೆ.
Related Articles
Thank you for your comment. It is awaiting moderation.



Comments (0)