ನನ್ನ ಬಳಿಯೂ ಡೈರಿಗಳಿವೆ ಸಮಯ ಬಂದಾಗ ನಾನೇನು ಎಂದು ತೋರಿಸುತ್ತೇನೆ: ಡಿಕೆಶಿ ಕಿಡಿ
- by Suddi Team
- June 20, 2018
- 100 Views
ಬೆಂಗಳೂರು: ನನ್ನ ಬಳಿಯೂ ಸಾಕಷ್ಟು ಡೈರಿಗಳಿವೆ ಸಮಯ ಬಂದಾಗ ಬಿಡೋದು ನಂಗೂ ಗೊತ್ತಿದೆ. ನನ್ನನ್ನೇ ಏಕೆ ಟಾರ್ಗೆಟ್ ಮಾಡ್ತಿದ್ದಾರೆ ಯಾಕೆ ? ಬೇರೆಯವರ ಮನೇಲಿ ಡೈರಿ, ಲೆಕ್ಕ ಇಟ್ಟಿದ್ದು ಗೊತ್ತಿದ್ರೂ ಯಾಕೆ ಅಂತವರ ಮೇಲೆ ದಾಳಿ ಇಲ್ಲ. ನನ್ನನ್ನ ಹೆದರಿಸಲು ಬಂದ್ರೆ ನಾನೇನು ಹೆದರಲ್ಲ ಎನ್ನುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನಗೆ, ನನ್ನ ಸಂಬಂಧಿಕರಿಗೆ ಹಾಗೂ ಆಪ್ತರಿಗೆ ಸಾಕಷ್ಟು ಕಿರುಕುಳ ಕೊಡುತ್ತಿದ್ದಾರೆ. ಇದೆಲ್ಲವೂ ಯಾಕೆ ಮಾಡ್ತಿದ್ದಾರೆ ಅಂತ ಗೊತ್ತಿದೆ. ನಾನು ಈಗ ಮಾತನಾಡಲ್ಲ,ಸಮಯ ಬಂದಾಗ ಮಾತನಾಡುತ್ತೇನೆ. ನಿಮಗೆ ಏನು ಅನ್ಸುತ್ತೆ ಅದನ್ನ ನೀವು ಮಾಡಿ, ಅವರಿಗೆ ಏನು ಅನ್ಸುತ್ತೆ ಅದನ್ನ ಅವರು ಮಾಡಲಿ. ಕೊನೆಗೆ ದೇಶ, ಕಾನೂನು ಎಲ್ಲವೂ ಇದೆ. ಕಾನೂನು ಮೂಲಕ ಹೋರಾಟ ಮಾಡೋದು ಗೊತ್ತಿದೆ ಎಂದು ಹೇಳಿದರು.
ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಡಿಕೆಶಿ ಯಾವುದಕ್ಕೂ ಹೆದರುವುದಿಲ್ಲ. ನಾನು ಕಾನೂನಿಗೆ ಬೆಲೆ ಕೊಡುವವನು, ಕೋರ್ಟ್ ನಲ್ಲಿ ಇರೋದ್ರಿಂದ ಈಗ ಏನು ಹೇಳೋದಿಲ್ಲ. ಇಲ್ಲದಿದ್ದರೆ ನಾನೇನು ಅನ್ನೋದನ್ನ ತೋರಿಸುತ್ತಿದ್ದೆ. ಈಗ ಒಂದು ಐಟಿ ಕೇಸ್ ಪಿಟ್ ಮಾಡಿದ್ದಾರೆ. ಆದರೆ, ಸಮನ್ಸ್ ಇನ್ನೂ ಯಾವುದು ಬಂದಿಲ್ಲ. ವಿಚಾರಣೆಗೆ ಹಾಜರಾಗಿ ಅಂತ ನೊಟೀಸ್ ಬಂದಿದೆ. ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ನನಗೆ, ನನ್ನ ತಾಯಿ ಹಾಗೂ ಸಹೋದರನಿಗೆ ನೊಟೀಸ್ ಬಂದಿದೆ.
ನ್ಯಾಯಾಲಯದಿಂದ ಇನ್ನೆರಡು ಸಮನ್ಸ್ ದಿನಗಳಲ್ಲಿ ಪೋಸ್ಟಲ್ ಮೂಲಕ ಸಮನ್ಸ್ ಬರಬಹುದು. ವಿಚಾರಣೆಗೆ ಹಾಜರಾಗುತ್ತೇವೆ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದರು.
Related Articles
Thank you for your comment. It is awaiting moderation.


Comments (0)