ಪಾಕಿಸ್ತಾನ ಸೋಲಿಸಿದ್ದ ಬ್ರಿಗೇಡಿಯರ್ ಕುಲದೀಪ್ ಸಿಂಗ್ ನಿಧನ: ಜಿಟಿಡಿ ಸಂತಾಪ
- by Suddi Team
- November 17, 2018
- 108 Views
ಬೆಂಗಳೂರು:ಬ್ರಿಗೇಡಿಯರ್ ಕುಲದೀಪ್ ಸಿಂಗ್ ಚಂದ್ಪುರಿ ಅವರ ಅಕಾಲಿಕ ನಿಧನಕ್ಕೆ ಸಚಿವ ಜಿಟಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ.
1971ರ ಯುದ್ಧದಲ್ಲಿ ಪಾಕ್ ಪಡೆಯನ್ನು ಮಣಿಸಿ “ಭಾರತದ ಹೀರೋ” ಎನಿಸಿಕೊಂಡಿದ್ದ ಬ್ರಿಗೇಡಿಯರ್ ಕುಲದೀಪ್ ಸಿಂಗ್ ಚಂದ್ಪುರಿ ಅವರು ಅಕಾಲಿಕ ನಿಧನ ಈ ದೇಶಕ್ಕೆ ತುಂಬಲಾರದ ನಷ್ಟ. 1997ರಲ್ಲಿ ತೆರೆಕಂಡಿದ್ದ ಸೂಪರ್ಹಿಟ್ “ಬಾರ್ಡರ್“ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ ಕುಲದೀಪ್ ಸಿಂಗ್ ಚಂದ್ಪುರಿ ಅವರು “ಲಾಂಗೆವಾಲಾ” ಯುದ್ಧದ ಮೂಲಕ ಹೆಸರು ವಾಸಿಯಾಗಿದ್ದರು. ಅವರ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿ ಶಾಂತಿ ನೀಡಲಿ. ಅವರ
ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ತಿಳಿಸಿದ್ದಾರೆ.
Related Articles
Thank you for your comment. It is awaiting moderation.


Comments (0)