- ದೇಶ
- ಮುಖ್ಯ ಮಾಹಿತಿ
- ವಾಣಿಜ್ಯ
- Like this post: 0
ಹಿಂಸಾತ್ಮಕ ಮೆಸೇಜ್ಗಳಿಗೆ ಕಡಿವಾಣ ಹಾಕಲು ಬದ್ಧ: ವಾಟ್ಸಾಪ್ ಸಂಸ್ಥೆ
- by Suddi Team
- July 4, 2018
- 462 Views
ನವದೆಹಲಿ: ವಾಟ್ಸಾಪ್ನಲ್ಲಿ ಹರಿದಾಡುವ ಫಾರ್ವಡ್ ಮೆಸೇಜ್ಗಳಿಂದ ಆಗುತ್ತಿರುವ ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ವಾಟ್ಸಾಪ್ ಸಂಸ್ಥೆ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಸಂಸ್ಥೆ ತಿಳಿಸಿದೆ.
ವಾಟ್ಸಾಪ್ ವೇದಿಕೆಯ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಹಿತಿ ತಂತ್ರಜ್ಞಾನ ಇಲಾಖೆ ವಾಟ್ಸಾಪ್ ಸಂಸ್ಥೆಗೆ ಪತ್ರ ಬರೆದಿತ್ತು. ಪತ್ರಕ್ಕೆ ಉತ್ತರ ನೀಡಿರುವ ವಾಟ್ಸಾಪ್ ಸಂಸ್ಥೆ,
ನಮ್ಮ ವೇದಿಕೆಯನ್ನು ಬಳಸಿಕೊಂಡು ಅಮಾಯಕರ ಹಿಂಸಾಚಾರ ನಡೆಸುತ್ತಿರುವುದು ನಮಗೂ ದಂಗೂ ಬಡಿಸಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಹೊಸ ಮೆಸೇಜ್ ಫಾರ್ವಡ್ ಮಾಡುವಾಗ ಅದನ್ನು ಹೈಲೈಟ್ ಮಾಡುವ ಲೇಬಲ್ ಹಾಕಲಾಗುವುದು ಎಂದು ಸಂಸ್ಥೆ ಹೇಳಿದೆ.
ಸುಳ್ಳು ಸುದ್ದಿ, ಸುಳ್ಳು ಮಾಹಿತಿ ಮತ್ತು ಸುಳ್ಳುಗಳ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ, ನಾಗರಿಕ ಸಮಾಜ ಮತ್ತು ತಂತ್ರಜ್ಞಾನ ಕಂಪನಿಗಳು ಒಟ್ಟಾಗಿ ಕಾರ್ಯನಿರ್ವಹಿಸ ಬೇಕಿದೆ ಎಂದು ಸಂಸ್ಥೆ ತಿಳಿಸಿದೆ.
ಅನಗತ್ಯ ಮಾಹಿತಿಯ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚಿಗೆ ಗ್ರೂಪ್ ಚಾಟ್ ಗಳಿಗೆ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Related Articles
Thank you for your comment. It is awaiting moderation.


Comments (0)