ಅಮ್ಮಿನಬಾವಿ ಹಿರೇಮಠದ ಜಾತ್ರಾ ಮಹೋತ್ಸವ: ಮಾ. 23ಕ್ಕೆ ರಥೋತ್ಸವ, ಮಾ. 8ರಿಂದ ಪುರಾಣ ಪ್ರವಚನ
- by Suddi Team
- March 8, 2026
- 9 Views
ಧಾರವಾಡ: ತಾಲ್ಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀಗುರುಶಾಂತಲಿಂಗ ಶಿವಯೋಗಿಗಳ ವಾರ್ಷಿಕ ಜಾತ್ರಾ ಮಹೋತ್ಸವವು ಮಾರ್ಚ್ 23 ರಂದು ವಿಜೃಂಭಣೆಯಿಂದ ಜರುಗಲಿದೆ.
ಜಾತ್ರೆಯ ಅಂಗವಾಗಿ ಮಾ. 8 ರಿಂದ 22 ರವರೆಗೆ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರಿಂದ ‘ಕಲಬುರ್ಗಿ ಶರಣಬಸವೇಶ್ವರ ಪುರಾಣ’ ಪ್ರವಚನ ನಡೆಯಲಿದೆ. ಮಾ. 8 ರಂದು ಸಂಜೆ 6.30ಕ್ಕೆ ಜಮಖಂಡಿ ಶಾಸಕ ಜಗದೀಶ ಗುಡಗುಂಟಿಮಠ ಅವರು ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನೆಗಳೂರಿನ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬಳ್ಳಾರಿ ಕಲ್ಯಾಣಮಠದ ಶ್ರೀಕಲ್ಯಾಣ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಮಾ. 20ಕ್ಕೆ ಧರ್ಮ ಜಾಗೃತಿ ಸಮಾವೇಶ:
ಜಾತ್ರಾ ಮಹೋತ್ಸವದ ಅಂಗವಾಗಿ ಮಾ. 20 ರಂದು ಸಂಜೆ 6.30ಕ್ಕೆ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ‘ಧರ್ಮ ಜಾಗೃತಿ ಸಮಾವೇಶ’ ಆಯೋಜಿಸಲಾಗಿದೆ. ಮಾಜಿ ಶಾಸಕ ಅಮೃತ ದೇಸಾಯಿ ಸಮಾವೇಶ ಉದ್ಘಾಟಿಸಲಿದ್ದು, ಸುಳ್ಳದ ಶ್ರೀಶಿವಸಿದ್ಧರಾಮೇಶ್ವರ ಶ್ರೀಗಳು, ಶಿರಕೋಳದ ಶ್ರೀಗುರುಸಿದ್ಧೇಶ್ವರ ಶ್ರೀಗಳು, ಇನಾಂಹೊಂಗಲದ ಶ್ರೀಅಭಿನವ ಸಿದ್ಧಲಿಂಗ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಸೀಮಾ ಮಸೂತಿ, ಉದ್ಯಮಿ ಮಂಜುನಾಥ ಮಕ್ಕಳಗೇರಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಜಿ.ಪಂ ಮಾಜಿ ಉಪಾಧ್ಯಕ್ಷ ನಿಜನಗೌಡ ಪಾಟೀಲ ಪಾಲ್ಗೊಳ್ಳಲಿದ್ದಾರೆ.
ಧರ್ಮ ಸಂಗಮ ಸಮಾವೇಶ ಹಾಗೂ ಗಣ್ಯರ ಆಗಮನ
ಮಾರ್ಚ್ 22ರಂದು ಸಂಜೆ 6.30ಕ್ಕೆ ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಶ್ರೀ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ‘ಧರ್ಮ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಾವೇಶವನ್ನು ಶಾಸಕ ವಿನಯ ಕುಲಕರ್ಣಿ ಉದ್ಘಾಟಿಸಲಿದ್ದು, ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಂಪಸಾಗರ, ಬೆಳಗುಂಪಾ ಹಾಗೂ ಹುಡುಗಿ ಗ್ರಾಮದ ವಿವಿಧ ಶಿವಾಚಾರ್ಯರು ಭಾಗವಹಿಸಲಿದ್ದು, ಜನಪ್ರತಿನಿಧಿಗಳಾದ ಶಿವಲೀಲಾ ಕುಲಕರ್ಣಿ ಮತ್ತು ಗುರುರಾಜ ಹುಣಸೀಮರದ ಸೇರಿದಂತೆ ಹಲವು ಪ್ರಮುಖರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಗುಗ್ಗಳ ಮಹೋತ್ಸವ ಮತ್ತು ಸಾಂಸ್ಕೃತಿಕ ವೈಭವ
ಜಾತ್ರಾ ಮಹೋತ್ಸವದ ಭಾಗವಾಗಿ ಮಾರ್ಚ್ 22ರ ಮುಂಜಾನೆ ಶ್ರೀ ವೀರಭದ್ರ ದೇವರ ಸಾಮೂಹಿಕ ಗುಗ್ಗಳ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಧಾರ್ಮಿಕ ವಿಧಿವಿಧಾನಗಳಲ್ಲಿ ಅಮ್ಮಿನಬಾವಿ ಹಿರೇಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ವಿಶೇಷವಾಗಿ, ಗದಗಿನ ಪುಣ್ಯಾಶ್ರಮದ ವೀರೇಶಕುಮಾರ ಮಳಲಿ ಅವರಿಂದ 15 ದಿನಗಳ ಕಾಲ ಸತತವಾಗಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಮಲ್ಲಿಕಾರ್ಜುನ ಕೆರಕನಹಳ್ಳಿ ಅವರು ತಬಲಾ ಸಾಥ್ ನೀಡಲಿದ್ದಾರೆ.
ಭವ್ಯ ರಥೋತ್ಸವ ಮತ್ತು ಸಾಮಾಜಿಕ ಸೇವೆ
ಮಾರ್ಚ್ 23ರ ಸಾಯಂಕಾಲ 5 ಗಂಟೆಗೆ ಶ್ರೀ ಗುರುಶಾಂತಲಿಂಗ ಶಿವಯೋಗಿಗಳ ರಥೋತ್ಸವವು ಸಕಲ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಲಿದೆ. ಇದೇ ದಿನ ಬೆಳಿಗ್ಗೆ ವಿವಿಧ ಅರ್ಚಕರ ನೇತೃತ್ವದಲ್ಲಿ ಜಂಗಮ ವಟುಗಳಿಗೆ ಶಿವದೀಕ್ಷೆ ಹಾಗೂ ಅಯ್ಯಾಚಾರ ಕಾರ್ಯಕ್ರಮಗಳು ನಡೆಯಲಿವೆ. ಕೇವಲ ಧಾರ್ಮಿಕ ಅಷ್ಟೇ ಅಲ್ಲದೆ, ಜನರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 8ರಿಂದ 23ರವರೆಗೆ ಮಠದಲ್ಲಿ ನಿರಂತರವಾಗಿ ದಾಸೋಹ ವ್ಯವಸ್ಥೆ ಇರಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
Related Articles
Thank you for your comment. It is awaiting moderation.


Comments (0)