ಅಮ್ಮಿನಬಾವಿ ಸರಕಾರಿ ಶಾಲೆಯ ಸ್ನೇಹ ಸಮ್ಮೇಳನ
- by Suddi Team
- February 26, 2026
- 116 Views
ಧಾರವಾಡ: ಇಲ್ಲಿಗೆ ಹತ್ತಿರದ ತಾಲೂಕಿನ ಅಮ್ಮಿನಬಾವಿ ಗ್ರಾಮದ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಕನ್ನಡ ಸರಕಾರಿ ಶಾಲೆಯಲ್ಲಿ ಇತ್ತೀಚೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು.
ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜುನಾಥ ಅಂಗಡಿ ಸಮ್ಮೇಳನ ಉದ್ಘಾಟಿಸಿದರು. ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ದೀಪಾ ಸಿದ್ದಕ್ಕನವರ, ಸದಸ್ಯರುಗಳಾದ ವಿಶ್ವನಾಥ ದೇವರಮನಿ, ಪುಂಡಲೀಕ ವಿಠ್ಠೋಜಿ, ಮಂಜುನಾಥ ಪಾಲಕನವರ, ಸಂತೋಷ ನಾವಳ್ಳಿ, ಮಂಜುಳಾ ಸಿದ್ದಕ್ಕನವರ, ರತ್ನಾ ಅರಳಿಕಟ್ಟಿ, ಸವಿತಾ ಪಾಲಕನವರ, ದೀಪಾ ಇಂಚಗೇರಿಮಠ, ಯಲ್ಲವ್ವ ಗಿಡಮೂಲಿ ಹಾಗೂ ಗೀತಾ ಕಂಬಳಿ ಹಾಗೂ ಧಾರವಾಡ ತಾಲೂಕು ಟೀಚರ್ಸ ಸೊಸೈಟಿ ಅಧ್ಯಕ್ಷ ಶಂಕರೆಪ್ಪ ಘಟ್ಟಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮುಖ್ಯಾಧ್ಯಾಪಕ ಶಾಮಸುಂದರ ದೇಸಾಯಿ, ಹಿರಿಯ ಶಿಕ್ಷಕಿಯರುಗಳಾದ ಪ್ರೇಮಾ ಗುಡಿ, ಗೀತಾ ಉಳ್ಳಿಕಾಶಿ, ಅನುಪಮಾ ಹಳಕೊಪ್ಪ, ಖಾನಬಿ ಬಡೆಖಾನ್ನವರ, ಸುಜಾತಾ ಮುತಾಲಿಕದೇಸಾಯಿ ಹೊರ ಹೋಗುವ 8ನೆಯ ತರಗತಿ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಅಶ್ವಿನಿ ಗೊಬ್ಬರಗುಂಪಿ, ಪ್ರತೀಕ್ಷಾ ಕಂಚಗಾರ ಹಾಗೂ ಕುಮಾರಿ ದಾಸನಕೊಪ್ಪ ಅನಿಸಿಕೆಗಳನ್ನು ಹಂಚಿಕೊಂಡರು. ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣ ಬೊಂಗಾಳೆ ನಿರೂಪಿಸಿ ವಂದಿಸಿದರು.
ಸನ್ಮಾನ : ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕ ಗೂಡೂಸಾಬ ನದಾಫ್ ಹಾಗೂ ವಿದ್ಯಾರ್ಥಿನಿಯರಿಗೆ ಫುಟ್ಬಾಲ್ ತರಬೇತಿ ನೀಡುತ್ತಿರುವ ಎನ್ಬ್ಲಿಂಗ್ ಲೀಡರ್ಶಿಪ್ ಸಂಸ್ಥೆ ಮುಖ್ಯಸ್ಥ ಮಹಾದೇವ ಬಾರಾಟಕ್ಕೆ ಹಾಗೂ ಇತರೇ ಕೋಚರ್ಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಕನ್ನಡ ಸರಕಾರಿ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದ ಸಂದರ್ಭದಲ್ಲಿ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳು ಗುಂಪುಚಿತ್ರ ತೆಗೆಸಿಕೊಂಡರು.
Related Articles
Thank you for your comment. It is awaiting moderation.


Comments (0)