ಇನ್ಮುಂದೆ ಪಾರ್ಕಿಂಗ್ ಜಾಗವಿದ್ರೆ ಮಾತ್ರ ಕಾರು ನೋಂದಣಿ:ಹೊಸ ನಿಯಮ ಜಾರಿಗೆ ಚಿಂತನೆ
- by Suddi Team
- June 20, 2018
- 109 Views
ಬೆಂಗಳೂರು: ಸ್ವಂತ ಕಾರು ಖರೀದಿ ಮಾಡಬೇಕೆಂದುಕೊಂಡಿದ್ರೆ ಮೊದಲು ಕಾರ್ ಪಾರ್ಕಿಂಗ್ ಗೆ ಜಾಗ ಹುಡುಕಲು ಶುರುಮಾಡಿ, ಇಲ್ಲದಿದ್ರೆ ನಿಮ್ಮ ಕಾರು ನೋಂದಣಿಯೇ ಆಗಲ್ಲ.
ಸಿಲಿಕಾನ್ ಸಿಟಿಯಲ್ಲಿ ಅಲ್ಪಸ್ವಲ್ಪ ಹಣ ಕೂಡಿಟ್ಟು ಇಎಂಐ ಕಟ್ಟಿ ಕಾರು ಖರೀದಿಸಬೇಕು ಎನ್ನುವವರ ಸಂಖ್ಯೆ ದೊಡ್ಡದಿದೆ,ಆದ್ರೆ ಅವರಿಗೆಲ್ಲಾ ಸಾರಿಗೆ ಇಲಾಖೆ ಶಾಕ್ ನೀಡಿದೆ.ಹೊಸ ಕಾರು ಕೊಳ್ಳುವವರ ಮನೆ ಮುಂದೆ ಕಾರ್ ಪಾರ್ಕಿಂಗ್ ಗೆ ಜಾಗ ಇದ್ರೆ ಮಾತ್ರ ನೋಂದಣಿ, ಪಾರ್ಕಿಂಗ್ ಗೆ ಜಾಗ ಇಲ್ಲದಿದ್ದರೆ ಕಾರು ನೋಂದಣಿಗೆ ಅವಕಾಶ ಇಲ್ಲ ಇಂತಹ ನಿಯಮ ತರಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ,ಮನೆ ಮುಂದಿನ ಫುಟ್ ಪಾತ್ ಮೇಲೆ ಕಾರು ನಿಲ್ಲಿಸುತ್ತಿರುವ ಕಾರಣ ಸಂಚಾರಕ್ಕೆ ಸಾಕಷ್ಟು ಅಡಚಣೆಯಾಗುತ್ತಿದೆ, ಇದಕ್ಕೆ ಕಡಿವಾಣ ಹಾಕಲು ಇಂತಹ ನಿಯಮ ತರಲು ಚಿಂತನೆ ನಡೆಸಿದ್ದು, ಸಾರ್ವಜನಿಕರ ಜೊತೆ ಚರ್ಚೆ ನಡೆಸಿ ನಿಯಮ ರೂಪಿಸಲಿದೆ.
ಒಂದು ವೇಳೆ ಸರ್ಕಾರ ಈ ನಿಯಮ ಜಾರಿಗೆ ತಂದಿದ್ದೇ ಆದಲ್ಲಿ ನಗರದಲ್ಲಿನ ಕಾರು ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿಯುವುದು ಗ್ಯಾರಂಟಿ.ಬೇರೆ ಜಿಲ್ಲೆಗಳಲ್ಲಿ ವಾಹನ ನೋಂದಾಯಿಸಿಕೊಂಡು ನಗರಕ್ಕೆ ಕಾರುಗಳನ್ನು ತರುವ ಪರ್ಯಾಯ ಆಯ್ಕೆಗೆ ಜನ ಹೋಗುವ ಸಾಧ್ಯತೆ ಇದೆ.ಇದನ್ನೆಲ್ಲಾ ಹೇಗೆ ನಿಯಂತ್ರಿಸಬೇಕು ಎನ್ನುವ ಕುರಿತು ಸಾರಿಗೆ ಇಲಾಖೆ ಚರ್ಚೆ ನಡೆಸಲಿದೆ.
Related Articles
Thank you for your comment. It is awaiting moderation.


Comments (0)