ತೆನೆಹೊತ್ತ ಮಹಿಳೆ ಕೈಹಿಡಿದ ಬಿನ್ನಿಪೇಟೆ ಮತದಾರ!
- by Suddi Team
- June 20, 2018
- 100 Views
ಬೆಂಗಳೂರು: ಬಿನ್ನಿಪೇಟೆ ವಾರ್ಡ್ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ನಾಗರಾಜ್ ಸಮಾರು 2 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಮೂಲಕ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ಗೆ ತೀವ್ರ ಮುಖಭಂಗವಾಗಿದೆ.
ದಿನೇಶ್ ಗುಂಡೂರಾವ್ ಮತ್ತು ಬಿಟಿಎಸ್ ನಾಗರಾಜ್ ಪ್ರತಿಷ್ಠೆಯ ಕಣವಾಗಿದ್ದ ಬಿನ್ನಿಪೇಟೆ ವಾರ್ಡ್ ಉಪ ಚುನಾವಣೆಯಲ್ಲಿ ಬಿಟಿಸ್ ನಾಗರಾಜ್ ಮಗಳು ಐಶ್ವರ್ಯ ನಾಗರಾಜ್ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ – 7188, ಕಾಂಗ್ರೆಸ್ 5249, ಬಿಜೆಪಿ – 2455 ಮತಗಳನ್ನು ಪಡೆದಿದ್ದಾರೆ.
ಫಲಿತಾಂಶ ಬಳಿಕ ಮಾತನಾಡಿದ ಐಶ್ವರ್ಯ, ದಿನೇಶ್ ಗುಂಡೂರಾವ್ ಇನ್ನಾದ್ರೂ ವಾರ್ಡ್ ನಲ್ಲಿ ಕೆಲಸ ಮಾಡಿಸಲಿ. ಹಣ ಹಂಚಿದರೆ ಓಟ್ ಹಾಕ್ತಾರೆ ಅನ್ನೋದನ್ನು ದಿನೇಶ್ ಗುಂಡೂರಾವ್ ಮರೆಯಬೇಕು. ಬಿನ್ನಿಪೇಟೆ ಕಾಂಗ್ರೆಸ್ ಭದ್ರಕೋಟೆ ಅಂತ ದಿನೇಶ್ ಗುಂಡೂರಾವ್ ಹೇಳ್ತಿದ್ರು. ಆದರೆ ಇದು ಜನರ ಗೆಲುವು, ಬಿನ್ನಿಪೇಟೆಯಲ್ಲಿ ಕಾಂಗ್ರೇಸ್ ಇದ್ದಿದ್ದೇ ನಮ್ಮ ಅಪ್ಪನಿಂದ ಎಂದು ದಿನೇಶ್ ಗುಂಡೂರಾವ್ ವಿರುದ್ದ ಕಿಡಿಕಾರಿದರು.
Related Articles
Thank you for your comment. It is awaiting moderation.
Comments (0)