ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಹಾವೇರಿ: ಮಗುವನ್ನ ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಟ್ಟು ಬಾವಿ ನೀರು ಮುಟ್ಟಿಸೋ ಮೂಲಕ ಹರಕೆ ತೀರಿಸೋ ವಿಚಿತ್ರ ಪದ್ದತಿಯೊಂದು ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ದರ್ಗಾದಲ್ಲಿದೆ.
ಪಟ್ಟಣದ ಹಜರತ್ ಫೀರ ಸಯ್ಯದ ಅಲ್ಲಾವುದ್ದೀನ್ ಶಾ ಖಾದ್ರಿ ದರ್ಗಾದಲ್ಲಿ ಇಂಥಾದ್ದೊಂದು ಪದ್ದತಿ ಇದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ಪದ್ದತಿಯ ದೃಶ್ಯಗಳು ಈಗ ವೈರಲ್ ಆಗಿವೆ. ಮಕ್ಕಳಾಗದವರು ದರ್ಗಾಕ್ಕೆ ಹರಕೆ ಹೊತ್ತು ಮಕ್ಕಳಾದ ನಂತರ ಮಕ್ಕಳನ್ನ ದರ್ಗಾಗೆ ಕರೆತಂದು ದರ್ಗಾದಲ್ಲಿರೋ ಬಾವಿಯ ನೀರು ಮುಟ್ಟಿಸಿ ಹರಕೆ ತೀರಿಸೋ ಪದ್ದತಿ ಇದು.
ಮಕ್ಕಳನ್ನ ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಡುವಾಗ ಸ್ವಲ್ಪ ಯಾಮಾರಿದ್ರೂ ಮಕ್ಕಳು ಯಮಲೋಕ ಸೇರೋದು ಗ್ಯಾರಂಟಿ. ಹಲವಾರು ವರ್ಷಗಳಿಂದ ಇಂಥಾದ್ದೊಂದು ಪದ್ದತಿ ದರ್ಗಾದಲ್ಲಿ ನಡೆದುಕೊಂಡು ಬಂದಿದ್ರೂ ತಾಲೂಕು ಮತ್ತು ಜಿಲ್ಲಾಡಳಿತ ಇಂಥಾ ವಿಚಿತ್ರ ಪದ್ದತಿಗೆ ಕಡಿವಾಣ ಹಾಕೋಕೆ ಮುಂದಾಗದೆ ಇರೋದು ವಿಪರ್ಯಾಸದ ಸಂಗತಿ.
Comments (0)