ಸಚ್ಛತೆ ಕಾಯ್ದುಗೊಳ್ಳದ ಸಿಬ್ಬಂದಿ:ಇಂದಿರಾ ಕ್ಯಾಂಟೀನ್‌ಗೆ ಬಿತ್ತು ಬೀಗ!
- by Suddi Team
- July 9, 2018
- 103 Views
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಇಂದಿರಾ ಕ್ಯಾಂಟೀನ್ ಯೋಜನೆ ಹಳ್ಳಹಿಡಿಯಲಿದೆಯೇ ಎನ್ನುವ ಅನುಮಾನ ಮೂಡಿದೆ.ಸ್ವಚ್ಚತೆ ಕಾಪಾಡದ ಸಿಬ್ಬಂದಿಯ ನಡೆ ಖಂಡಿಸಿ ಒಂದು ಕ್ಯಾಂಟೀನ್ ಗೆ ಸ್ಥಳೀಯರೇ ಬೀಗ ಜಡಿದಿದ್ದಾರೆ.
ಅಗ್ಗದ ದರಕ್ಕೆ ಊಟ ತಿಂಡಿ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಸ್ವಚ್ಛತೆಯ ಸಮಸ್ಯೆ ತಲೆದೂರಿದೆ ಎನ್ನುವ ಆರೋಪಗಳು ಕೇಳಿಬಂದಿದೆ.ಬಿಳೇಕಳ್ಳಿ ವಾರ್ಡಿನಲ್ಲಿರುವ ಇಂದಿರಾ ಕ್ಯಾಂಟೀನ್ ಸಮೀಪ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕ್ಯಾಂಟೀನ್ ಗೆ ಸಾರ್ವಜನಿಕರೇ ಬೀಗ ಜಡಿದಿದ್ದಾರೆ.
ಸರ್ಕಾರದ ಅವ್ಯವಸ್ಥೆಗೆ ಸಾರ್ವಜನಿಕರ ಆಕ್ಷೇಪ.ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಬಿತ್ತು ಬೀಗ.ಇಂದಿರಾ ಕ್ಯಾಂಟೀನ್‌ಗೆ ಬೀಗ ಜಡಿದ ಸಾರ್ವಜನಿಕರು.
ಇಂದಿರಾ ಕ್ಯಾಂಟೀನ್ ಸ್ವಚ್ಛತೆ ಮಾಡದ ಸಿಬ್ಬಂದಿ ಕ್ಯಾಂಟೀನ್ ವೇಸ್ಟೇಜ್ ತಂದು ಮೋರಿಗೆ ಸುರಿಯುತ್ತಿದ್ದು ಇದರಿಂದ ಸುತ್ತಮುತ್ತ ಗಬ್ಬು ನಾರುತ್ತಿದೆ ಎಂದು ಆಕ್ರೋಶಗೊಂಡ ಸ್ಥಳೀಯರು ವಾರ್ಡ್ ನಂಬರ್ 188ರ ಇಂದಿರಾ ಕ್ಯಾಂಟೀನ್‌ಗೆ ಬೀಗ ಜಡಿದಿದ್ದಾರೆ.ವ್ಯವಸ್ಥೆ ಸರಿಪಡಿಸಿಕೊಳ್ಳೋವರೆಗೆ ಬೀಗ ತೆಗೆಯದಿರಲು ತೀರ್ಮಾನಿಸಿದ್ದಾರೆ.
Related Articles
Thank you for your comment. It is awaiting moderation.


Comments (0)