ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ರಣತಂತ್ರ: ಸ್ಕ್ರೀನಿಂಗ್ ಸಮಿತಿ ಮುಖ್ಯಸ್ಥರ ನೇಮಕ
- by Suddi Loka
- November 17, 2026
- 9 Views
ನವದೆಹಲಿ: ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳ ಸಿದ್ಧತೆಗಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಕ್ರೀನಿಂಗ್ ಸಮಿತಿಗಳ ಮುಖ್ಯಸ್ಥರು ಹಾಗೂ ಸದಸ್ಯರನ್ನು ನೇಮಕ ಮಾಡಿದ್ದಾರೆ. ನವೆಂಬರ್ 16ರಂದು ಪಕ್ಷ ಬಿಡುಗಡೆ ಮಾಡಿದ ಪ್ರಕಟಣೆಯಂತೆ ನೇಮಕಾತಿಗಳು ತಕ್ಷಣದಿಂದ ಜಾರಿಗೆ ಬಂದಿವೆ.
ಉತ್ತರ ಪ್ರದೇಶ ಸಮಿತಿಗೆ ಅಜಯ್ ಮಾಕೆನ್, ಪಂಜಾಬ್ಗೆ ಡಾ. ಸಿರಿವೆಲ್ಲಾ ಪ್ರಸಾದ್, ಉತ್ತರಾಖಂಡಕ್ಕೆ ದೀಪಾ ದಾಸ್ಮುನ್ಶಿ, ಗೋವಾಕ್ಕೆ ಕೆ.ಜೆ. ಜಾರ್ಜ್ ಮತ್ತು ಮಣಿಪುರಕ್ಕೆ ಬಿ.ಎಂ. ಸಂದೀಪ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಅಸ್ಲಾಂ ಶೇಖ್, ಬಿ.ವಿ. ಶ್ರೀನಿವಾಸ್, ಸಚಿನ್ ಸಾವಂತ್, ನಿವೇದಿತ್ ಆಳ್ವಾ, ಅನಿಲ್ ಚೌಧರಿ, ಪಾಲ್ ಭಾಯ್ ಅಂಬಾಲಿಯಾ, ಸತೇಜ್ ಡಿ. ಪಾಟೀಲ್, ಶಫಿ ಪರಂಬಿಲ್, ಹಿಬಿ ಈಡನ್ ಮತ್ತು ರಾಜೇಶ್ ಠಾಕೂರ್ ಸದಸ್ಯರಾಗಿದ್ದಾರೆ.
ಸಂಬಂಧಿತ ರಾಜ್ಯಗಳ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಹಾಗೂ ನಿಯೋಜಿತ ಎಐಸಿಸಿ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ.


Comments (0)