ಪ್ರಯಾಣಿಕರಿಗೆ ಸಿಹಿಸುದ್ದಿ: ನ.20ರಿಂದ ಬೆಂಗಳೂರು-ಹೊಸಪೇಟೆ ನಡುವೆ ನೂತನ ವೋಲ್ವೋ ಮಲ್ಟಿ ಆಕ್ಸಲ್ ಬಸ್ ಸೇವೆ ಆರಂಭ

ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಇದೇ ನವೆಂಬರ್ 20ರಿಂದ ಬೆಂಗಳೂರು ಮತ್ತು ಹೊಸಪೇಟೆ ನಡುವೆ ನೂತನ ವೋಲ್ವೋ ಮಲ್ಟಿ ಆಕ್ಸಲ್ (Volvo Multi Axle) ಬಸ್ ಸೇವೆಯನ್ನು ಆರಂಭಿಸಲಾಗುತ್ತಿದೆ.

ಈ ಐಷಾರಾಮಿ ಬಸ್ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಹೊರಟು ತುಮಕೂರು, ಸಿರಾ, ಚಿತ್ರದುರ್ಗ ಹಾಗೂ ಕೂಡ್ಲಿಗಿ ಮಾರ್ಗವಾಗಿ ಹೊಸಪೇಟೆ ತಲುಪಲಿದೆ. ಸಾರ್ವಜನಿಕರು ಈ ನೂತನ ಸಾರಿಗೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

ವೇಳಾಪಟ್ಟಿ ವಿವರ:

ಬೆಂಗಳೂರು-ಹೊಸಪೇಟೆ: ಸಂಜೆ 5:00ಕ್ಕೆ (17:00) ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟು, ರಾತ್ರಿ 10:30ಕ್ಕೆ (22:30) ಕೂಡ್ಲಿಗಿ ಹಾಗೂ ರಾತ್ರಿ 11:15ಕ್ಕೆ (23:15) ಹೊಸಪೇಟೆ ತಲುಪಲಿದೆ.

ಹೊಸಪೇಟೆ-ಬೆಂಗಳೂರು: ಬೆಳಿಗ್ಗೆ 6:15ಕ್ಕೆ (06:15) ಹೊಸಪೇಟೆಯಿಂದ ಹೊರಟು, ಬೆಳಿಗ್ಗೆ 7:00ಕ್ಕೆ (07:00) ಕೂಡ್ಲಿಗಿ ಹಾಗೂ ಮಧ್ಯಾಹ್ನ 12:45ಕ್ಕೆ ಬೆಂಗಳೂರು ತಲುಪಲಿದೆ.

ಆನ್‌ಲೈನ್ ಟಿಕೆಟ್ ದರ ವಿವರ (ಬೆಂಗಳೂರಿನಿಂದ):

ಕೂಡ್ಲಿಗಿ: ವಯಸ್ಕರಿಗೆ ₹740 | ಮಕ್ಕಳಿಗೆ ₹580

ಹೊಸಪೇಟೆ: ವಯಸ್ಕರಿಗೆ ₹850 | ಮಕ್ಕಳಿಗೆ ₹670

 

Related Articles

Comments (0)

Leave a Comment