ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಅಬ್ಬರ: ನಾಲ್ಕೇ ದಿನಕ್ಕೆ ₹500 ಕೋಟಿ ಗಳಿಕೆ
- by Suddi Loka
- November 9, 2026
- 172 Views
ಮುಂಬೈ: ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ₹499.20 ಕೋಟಿ ಗಳಿಸಿದೆ.
ನವೆಂಬರ್ 8ರಂದು ಭಾನುವಾರ ಭಾರತದಲ್ಲಿ 21,770 ಪ್ರದರ್ಶನಗಳಿಂದ ₹56.15 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಹಿಂದಿ ಆವೃತ್ತಿ ₹36.75 ಕೋಟಿ ಗಳಿಸಿದರೆ, ಕನ್ನಡದಲ್ಲಿ ₹7.25 ಕೋಟಿ, ತೆಲುಗಿನಲ್ಲಿ ₹6.25 ಕೋಟಿ, ತಮಿಳಿನಲ್ಲಿ ₹3.15 ಕೋಟಿ ಹಾಗೂ ಮಲಯಾಳಂನಲ್ಲಿ ₹2.75 ಕೋಟಿ ಸಂಗ್ರಹಿಸಿದೆ.

ಚಿತ್ರವು ಮೊದಲ ದಿನ ₹64.85 ಕೋಟಿ, ಎರಡನೇ ದಿನ ₹48.05 ಕೋಟಿ ಹಾಗೂ ಮೂರನೇ ದಿನ ₹69.80 ಕೋಟಿ ಗಳಿಸಿತ್ತು. ನಾಲ್ಕು ದಿನಗಳಲ್ಲಿ ಭಾರತದ ಒಟ್ಟು ನೆಟ್ ಗಳಿಕೆ ₹238.85 ಕೋಟಿ ತಲುಪಿದ್ದು, ಗ್ರಾಸ್ ಕಲೆಕ್ಷನ್ ₹285.20 ಕೋಟಿಯಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ನಾಲ್ಕನೇ ದಿನ ₹45 ಕೋಟಿ ಗಳಿಸಿದ್ದು, ಒಟ್ಟು ವಿದೇಶಿ ಗ್ರಾಸ್ ಸಂಗ್ರಹ ₹214 ಕೋಟಿಗೆ ಏರಿದೆ.


Comments (0)