ಭಾರತದ ಹೆಮ್ಮೆಯ ವಿಜ್ಞಾನಿ ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ; ಯೋಧರ ರಕ್ಷಕ ಸೋನಂ ವಾಂಗ್ ಚುಕ್ ಕಣ್ಣೀರಿನ ಹೋರಾಟ!

ನವದೆಹಲಿ:ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ ‘3 Idiots’ ಚಿತ್ರದ ವಿಜ್ಞಾನಿ ಪಾತ್ರ ‘ಫುನ್ಸುಕ್ ವಾಂಗ್ಡು’ ನೆನಪಿದ್ದಾರಲ್ಲವೇ? ಆ ಕಲ್ಪಿತ ಪಾತ್ರದ ಹಿಂದಿರುವ ಅಸಲಿ ರಿಯಲ್ ಲೈಫ್ ಹೀರೋ ಲಡಾಖ್‌ನ ಸೋನಂ ವಾಂಗ್ ಚುಕ್. ಕೇವಲ ಪುಸ್ತಕದ ಬದನೆಕಾಯಿಯಂತಹ ಶಿಕ್ಷಣಕ್ಕೆ ಸೀಮಿತವಾಗದೆ, ವಿಜ್ಞಾನವನ್ನು ಸಮಾಜ ಮತ್ತು ದೇಶದ ರಕ್ಷಣೆಗಾಗಿ ಹೇಗೆ ಬಳಸಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಅಪರೂಪದ ಪ್ರತಿಭೆ ಇವರು. ಮೈನಸ್ 30 ಡಿಗ್ರಿಯ ಭೀಕರ ಚಳಿಯಲ್ಲಿ ದೇಶ ಕಾಯುವ ಗಡಿ ಕಾಯುವ ಯೋಧರಿಗೆ ಹಾಗೂ ಶೀತಲ ಮರುಭೂಮಿ ಲಡಾಖ್‌ಗೆ ಇವರು ನೀಡಿರುವ ಕೊಡುಗೆಗಳು ದೇಶದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆಯುವಂಥದ್ದು.

ಸಿಯಾಚಿನ್‌ನ ಭೀಕರ ಚಳಿಯಲ್ಲಿ ಯೋಧರಿಗೆ ಕವಚವಾದ ಸೋಲಾರ್ ಟೆಂಟ್!

ಗಲ್ವಾನ್ ಕಣಿವೆ ಮತ್ತು ಸಿಯಾಚಿನ್‌ನಂತಹ ಕಠಿಣ ಗಡಿಭಾಗಗಳಲ್ಲಿ ಭಾರತೀಯ ಸೇನೆಯ ಯೋಧರು ಮೈನಸ್ 14 ರಿಂದ ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ದೇಶವನ್ನು ಕಾಯುತ್ತಾರೆ. ಇಂತಹ ಕಡುಚಳಿಯಲ್ಲಿ ಯೋಧರು ತಂಗುವ ಟೆಂಟ್‌ಗಳನ್ನು ಬೆಚ್ಚಗಿಡಲು ಈ ಹಿಂದೆ ಲಕ್ಷಾಂತರ ಲೀಟರ್ ಸೀಮೆಎಣ್ಣೆ ಹಾಗೂ ಕಲ್ಲಿದ್ದಲನ್ನು ಬಳಸಲಾಗುತ್ತಿತ್ತು. ಇದು ದೇಶದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹೊರೆಯಾಗುತ್ತಿರುವುದರ ಜೊತೆಗೆ ವಿಷಗಾಳಿಯಿಂದ ಯೋಧರು ಅಸ್ವಸ್ಥರಾಗುವಂತೆ ಮಾಡುತ್ತಿತ್ತು.

ಇದಕ್ಕೆ ಕ್ರಾಂತಿಕಾರಿ ಪರಿಹಾರ ಕಂಡುಕೊಂಡ ವಾಂಗ್ ಚುಕ್, ವಿಶೇಷ ‘ಸೌರಶಕ್ತಿ ಚಾಲಿತ ಮಿಲಿಟರಿ ಟೆಂಟ್‌ಗಳನ್ನು’ (Solar-Heated Military Tents) ವಿನ್ಯಾಸಗೊಳಿಸಿದರು. ಈ ಟೆಂಟ್‌ಗಳ ವಿಶೇಷತೆಯೆಂದರೆ, ಹೊರಗೆ ಮೈನಸ್ 15 ಡಿಗ್ರಿ ಚಳಿ ಇದ್ದರೂ, ಯಾವುದೇ ಇಂಧನ ಅಥವಾ ಕರೆಂಟ್ ಇಲ್ಲದೆ ಕೇವಲ ಸೌರಶಕ್ತಿಯ ಸಹಾಯದಿಂದ ಟೆಂಟ್‌ನ ಒಳಭಾಗದಲ್ಲಿ ಪ್ಲಸ್ 15 ಡಿಗ್ರಿಯಷ್ಟು ಹಿತವಾದ ತಾಪಮಾನವನ್ನು ಕಾಯ್ದುಕೊಳ್ಳಬಹುದು.

ಸೇನೆಗೆ ಹಣದ ಉಳಿತಾಯ, ಪರಿಸರಕ್ಕೆ ರಕ್ಷಣೆ

ವಾಂಗ್ ಚುಕ್ ಅವರ ಈ ಆವಿಷ್ಕಾರದಿಂದಾಗಿ ಭಾರತೀಯ ಸೇನೆಗೆ ಪ್ರತಿವರ್ಷ ಇಂಧನ ಸಾಗಣೆಯ ಕೋಟ್ಯಂತರ ರೂಪಾಯಿ ಹಣ ಉಳಿತಾಯವಾಗುತ್ತಿದೆ. ಗಡಿಯಲ್ಲಿ ಕಾರ್ಬನ್ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ. ಅತಿ ಮುಖ್ಯವಾಗಿ, ಈ ಟೆಂಟ್‌ಗಳ ಯಾವುದೇ ಬಿಡಿಭಾಗವು 30 ಕೆಜಿಗಿಂತ ಹೆಚ್ಚು ತೂಕವಿಲ್ಲದ ಕಾರಣ, ವಾಹನಗಳು ಹೋಗಲಾಗದ ಎತ್ತರದ ಪರ್ವತಗಳಿಗೆ ಯೋಧರು ಇದನ್ನು ಸುಲಭವಾಗಿ ಹೊತ್ತೊಯ್ದು ಕೆಲವೇ ಗಂಟೆಗಳಲ್ಲಿ ತಾವೇ ಜೋಡಿಸಿಕೊಳ್ಳಬಹುದು.

ಕೃತಕ ಹಿಮನದಿ ‘ಐಸ್ ಸ್ತೂಪ’ ಮತ್ತು ಶೈಕ್ಷಣಿಕ ಕ್ರಾಂತಿ

ಹಿಮಾಲಯದ ತಪ್ಪಲಿನಲ್ಲಿರುವ ಲಡಾಖ್‌ನಲ್ಲಿ ಬೇಸಿಗೆಯ ಅವಧಿಯಲ್ಲಿ ತೀವ್ರ ನೀರಿನ ಅಭಾವ ಎದುರಾಗುತ್ತದೆ. ಇದಕ್ಕೆ ಪರಿಹಾರವಾಗಿ ವಾಂಗ್ ಚುಕ್ ಚಳಿಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಪೈಪ್‌ಗಳ ಮೂಲಕ ತಂದು, ಶಂಕುವಿನಾಕಾರದಲ್ಲಿ ಹೆಪ್ಪುಗಟ್ಟಿಸಿ ಕೃತಕ ಹಿಮನದಿಗಳನ್ನು ಸೃಷ್ಟಿಸಿದರು. ಇದಕ್ಕೆ ‘ಐಸ್ ಸ್ತೂಪ’ (Ice Stupa) ಎಂದು ಹೆಸರಿಡಲಾಗಿದ್ದು, ಇದು ಬೇಸಿಗೆಯಲ್ಲಿ ಕರಗಿ ಕೃಷಿಗೆ ನೀರೊದಗಿಸುತ್ತದೆ. ಈ ತಂತ್ರಜ್ಞಾನ ಇಂದು ಜಾಗತಿಕವಾಗಿ ಬಳಕೆಯಾಗುತ್ತಿದೆ.

ಅಷ್ಟೇ ಅಲ್ಲದೆ, 1988 ರಲ್ಲಿ ಅವರು ಸ್ಥಾಪಿಸಿದ ‘SECMOL’ ಸಂಸ್ಥೆಯು ಸಾಂಪ್ರದಾಯಿಕ ಪರೀಕ್ಷೆಗಳಲ್ಲಿ ಫೇಲ್ ಆದ ಗ್ರಾಮೀಣ ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ಮತ್ತು ಸುಸ್ಥಿರ ಬದುಕಿನ ಪಾಠ ಹೇಳಿಕೊಡುವ ಮೂಲಕ ಲಡಾಖ್‌ನ ಶೈಕ್ಷಣಿಕ ಚಿತ್ರಣವನ್ನೇ ಬದಲಾಯಿಸಿತು. ಮಣ್ಣಿನಿಂದಲೇ ಇಂಧನರಹಿತ ಪರಿಸರ ಸ್ನೇಹಿ ಸುಂದರ ಕಟ್ಟಡಗಳನ್ನು ನಿರ್ಮಿಸುವ ಕಲೆಯನ್ನೂ ಅವರು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಜಾಗತಿಕ ಮನ್ನಣೆ ಮತ್ತು ಪ್ರಶಸ್ತಿಗಳು

ದೇಶ ಮತ್ತು ಸಮುದಾಯಕ್ಕಾಗಿ ಅವರು ನೀಡಿದ ಈ ಅತ್ಯಪ್ರತಿಮ ಕೊಡುಗೆಗಳನ್ನು ಗುರುತಿಸಿ ಇವರಿಗೆ 2018 ರಲ್ಲಿ ಏಷ್ಯಾದ ಅತ್ಯುನ್ನತ ಗೌರವವಾದ ‘ರಾಮನ್ ಮ್ಯಾಗ್ಸೇಸೆ’ (Ramon Magsaysay Award) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸೋನಂ ವಾಂಗ್ ಚುಕ್ ಕೇವಲ ಒಬ್ಬ ಇಂಜಿನಿಯರ್ ಮಾತ್ರವಲ್ಲ, ದೇಶದ ಗಡಿ ಕಾಯುವ ಸೈನಿಕರ ಪಾಲಿನ ನಿಜವಾದ ಆಪದ್ಬಾಂಧವ ಹಾಗೂ ಭಾರತದ ಹೆಮ್ಮೆಯ ವಿಜ್ಞಾನಿ.

ಜಂತರ್ ಮಂತರ್‌ನಲ್ಲಿ ಕರಗುತ್ತಿರುವ ಜೀವ: ದೇಶದ ಯುವಜನತೆಗಾಗಿ ಹೋರಾಟ!

ಲಡಾಖ್‌ನ ಪರಿಸರ ರಕ್ಷಣೆಗಾಗಿ ಈ ಹಿಂದೆ ಹಲವು ದಿನಗಳ ಕಾಲ ‘ಕ್ಲೈಮೇಟ್ ಫಾಸ್ಟ್’ ನಡೆಸಿದ್ದ ಸೋನಂ ವಾಂಗ್ ಚುಕ್ ಅವರು, ಈಗ ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಇತ್ತೀಚೆಗೆ ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ NEET ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧ ಧ್ವನಿ ಎತ್ತಿರುವ ಅವರು, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಯುವಜನತೆಯ ಪರವಾಗಿ ಹೋರಾಟಕ್ಕೆ ಇಳಿದಿದ್ದಾರೆ.

ಜಂತರ್ ಮಂತರ್‌ನ ತೀವ್ರ ಬಿಸಿಲಿನ ನಡುವೆ ಕೇವಲ ಉಪ್ಪು ಮತ್ತು ನೀರನ್ನು ಮಾತ್ರ ಸೇವಿಸಿ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹವು ಮೂರನೇ ವಾರಕ್ಕೆ (19 ನೇ ದಿನ) ಕಾಲಿಟ್ಟಿದೆ. ಈಗಾಗಲೇ ಅವರು 9 ಕೆಜಿಗೂ ಹೆಚ್ಚು ತೂಕ ಕಳೆದುಕೊಂಡಿದ್ದು, ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿ ಹೈಕೋರ್ಟ್ ಸಹ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸಲು ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ.

“ನಾನು ಯಾವುದೇ ಹೀರೋ ಅಲ್ಲ, ಕೇವಲ ಒಬ್ಬ ಜವಾಬ್ದಾರಿಯುತ ನಾಗರಿಕ. ನನ್ನ ಈ ಹೋರಾಟ ಕೇವಲ ನನಗಾಗಿ ಅಲ್ಲ, ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ” ಎಂದು ವೀಲ್ ಚೇರ್‌ನಲ್ಲಿ ಕುಳಿತು ಕ್ಷೀಣ ಧ್ವನಿಯಲ್ಲಿ ವಾಂಗ್ ಚುಕ್ ನೀಡಿರುವ ಸಂದೇಶ ಇಡೀ ದೇಶದ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಗಡಿಯಲ್ಲಿ ಯೋಧರ ಪ್ರಾಣ ಉಳಿಸಲು ತಂತ್ರಜ್ಞಾನ ರೂಪಿಸಿದ ವಿಜ್ಞಾನಿಯೊಬ್ಬರು ಇಂದು ದೇಶದ ಯುವ ಪೀಳಿಗೆಯ ಭವಿಷ್ಯಕ್ಕಾಗಿ ದೆಹಲಿಯ ರಸ್ತೆಯಲ್ಲಿ ಜೀವ ಸವಿಸುತ್ತಿರುವುದು ಇಡೀ ದೇಶವೇ ಮೌನವಾಗಿ ಯೋಚಿಸುವಂತೆ ಮಾಡಿದೆ.

 

 

Related Articles

Comments (0)

Leave a Comment