ಶಾಂತಿವನದಲ್ಲಿ ಸ್ಲಿಮ್ ಅಂಡ್ ಫಿಟ್ ಆದ ಸಿದ್ದು: ನಾಳೆ ಬ್ಯಾಕ್ ಟು ಪೆವಿಲಿಯನ್!
- by Suddi Team
 - June 27, 2018
 - 111 Views
 
ಮಂಗಳೂರು: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಯೋಗ ಮತ್ತು ಧ್ಯಾನದ ಮೊರೆ ಹೋಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ನಾಳೆ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಕಳೆದ 10 ದಿನದಿಂದ ಶಾಂತಿವನದಲ್ಲಿ ಯೋಗ,ಧ್ಯಾನ,ಪ್ರಾಣಾಯಾಮ ಮಾಡಿ ಫಿಟ್ ಆಗಿರುವ ಸಿದ್ದು 12 ದಿನಗಳ ಪ್ಯಾಕೇಜ್ ಟ್ರೀಟ್ ಮೆಂಟ್ ಮುಗಿಸಿ ನಾಳೆ ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ.
ಚುನಾವಣಾ ಪ್ರಚಾರ ಕಾರ್ಯದಿಂದ ಬಸವಳಿದಿದ್ದ ಮನಸ್ಸಿಗೆ ಬೇಕಾದ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನವನ್ನೊಳಗೊಂಡ ಯೋಗಚಿಕಿತ್ಸೆ, ಜಲಚಿಕಿತ್ಸೆ, ಮಸಾಜ್ ಒಳಗೊಂಡ ಶರೀರಕ್ಕೆ ಶುದ್ಧೀಕರಣ ಚಿಕಿತ್ಸೆ ಹಾಗು ದೇಹದಲ್ಲಿ ಸೇರಿರುವ ಕಲ್ಮಶ ತೆಗೆಯಲು ಆಹಾರ ಚಿಕಿತ್ಸೆ ನೀಡಲಾಗಿದೆ.ಇದರೊಂದಿಗೆ ನಿಗದಿತ ಪ್ರಮಾಣದ ವ್ಯಾಯಾಮ,ವಾಕಿಂಗ್ ಸಿದ್ದು ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ತಂದಿದೆ.
ಶಾಂತಿವನ ಸೇರಿದ್ದ ಸಿದ್ದರಾಮಯ್ಯ ಇದೀಗ ಸ್ಲಿಮ್ ಅಂಡ್ ಫಿಟ್ ಆಗಿ ಹೊರಬರುತ್ತಿದ್ದಾರೆ.ನಾಳೆ ಸಂಜೆ ವೇಳೆಗೆ ಬೆಂಗಳೂರು ತಲುಪಲಿದ್ದು ಮತ್ತೆ ಸಕ್ರೀಯ ರಾಜಕಾರಣದಲ್ಲಿ ತೊಡಗಲಿದ್ದಾರೆ.ಸಿದ್ದು ಅನುಪಸ್ಥಿತಿಯಲ್ಲಿ ನಡೆದ ಗೊಂದಲಗಳ ಪರಿಹಾರಕ್ಕೆ ಸೂತ್ರ ರಚಿಸಲಿದ್ದಾರೆ ಎಂದು ಸಿದ್ದರಾಮಯ್ಯ ಆಪ್ತರು ಮಾಹಿತಿ ನೀಡಿದ್ದಾರೆ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)