ಅಮ್ಮಿನಬಾವಿ ಜಿನಾಲಯದಲ್ಲಿ ಪಿಂಛಿ ಪರಿವರ್ತನಾ ಸಮಾರಂಭ

ಧಾರವಾಡ:  ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀನೇಮಿನಾಥ ಜಿನಾಲಯದಲ್ಲಿ ಜುಲೈ-3 ರಿಂದ ಆರಂಭವಾಗಿ ಸತತ 140 ದಿನಗಳ ಕಾಲ ನಡೆದಿರುವ ಕಸಮಳಗಿ ಕ್ಷೇತ್ರದ ಗಣಿನಿ ಆರ್ಯಿಕಾರತ್ನ ಶ್ರೀಜಿನವಾಣಿ ಮಾತಾಜಿ ಅವರ 30ನೆಯ ಚಾತುರ್ಮಾಸ ಅನುಷ್ಠಾನದ ಸಮಾರೋಪ ಹಾಗೂ ಪಿಂಛಿ ಪರಿವರ್ತನಾ ಸಮಾರಂಭವು ಶುಕ್ರವಾರ (ನ.21 ರಂದು) ಮುಂಜಾನೆ 11 ಘಂಟೆಗೆ ಜರುಗಲಿದೆ.

ಶ್ರೀಜಿನವಾಣಿ ಮಾತಾಜಿ ಸೇರಿ ಅವರ ಸಂಘಪರಿವಾರದಲ್ಲಿರುವ ಆರ್ಯಿಕಾ ಶ್ರೀವಿನಮ್ರಜ್ಯೋತಿ ಮಾತಾಜಿ, ಕ್ಷುಲ್ಲಿಕಾ ಶ್ರೀಅಮೃತಜ್ಯೋತಿ ಮಾತಾಜಿ ಹಾಗೂ ಕ್ಷುಲ್ಲಿಕಾ ಶ್ರೀಅಚಲಜ್ಯೋತಿ ಮಾತಾಜಿ ಅವರು ಪಿಂಛಿ ಪರಿವರ್ತನೆ ಮಾಡುವರು. ಸಮಾರಂಭದ ಅಂಗವಾಗಿ ಎಸ್.ಡಿ.ಎಂ. ಸಂಸ್ಥೆಗಳ ಸಿಬ್ಬಂದಿ ಕಲಾತಂಡದಿಂದ ವಿವಿಧ ರೂಪಕ ಕಾರ್ಯಕ್ರಮಗಳು ಜರುಗಲಿವೆ.

ರಾಜ್ಯ ಮತ್ತು ಹೊರರಾಜ್ಯಗಳ ದೂರದ ಪ್ರದೇಶಗಳಿಂದ ಶ್ರೀಜಿನವಾಣಿ ಮಾತಾಜಿ ಅವರ ದರ್ಶನ ಪಡೆಯಲು ಭಕ್ತಗಣ ಆಗಮಿಸುತ್ತಿದ್ದು, ಸಕಲ ಭಕ್ತ ಸಂಕುಲಕ್ಕೆ ಪ್ರಸಾದ (ಅನ್ನಸಂತರ್ಪಣೆ) ವ್ಯವಸ್ಥೆ ಮಾಡಲಾಗಿದ್ದು, ದೂರದ ಭಾಗಗಳಿಂದ ಆಗಮಿಸುವ ಭಕ್ತರು ಶ್ರೀನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಅಧ್ಯಕ್ಷ ಟಿ.ಎಂ.ದೇಸಾಯಿ ಅವರ ಮೊಬೈಲ್ ಸಂಖ್ಯೆ : 7892750488 ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

Comments (0)

Leave a Comment