ಡಿ.21: ಮಾದಾರ ಚೆನ್ನಯ್ಯ ಜಯಂತಿ

ಧಾರವಾಡ : ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ(ಪರಿಶಿಷ್ಟ ಜಾತಿ) ಸಂಘಟನೆಯ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷ ಪಿ.ವೆಂಕಪ್ಪ ಅಧ್ಯಕ್ಷತೆಯಲ್ಲಿ ಡಿ.21 ರಂದು (ರವಿವಾರ) ಮುಂಜಾನೆ 11 ಗಂಟೆಗೆ ವಿದ್ಯಾಗಿರಿ ಹತ್ತಿರ ಇರುವ ಯಾಲಕ್ಕಿಶೆಟ್ಟರ ಕಾಲನಿಯ ಬಸವೇಶ್ವರ ಭವನದಲ್ಲಿ ನಡೆಯಲಿದೆ.

ಮಹಾಸಭಾದ ಹಿಂದಿನ ಸಭೆಗಳ ನಿರ್ಣಯಗಳನ್ನು ಚರ್ಚಿಸಿ ಅಂಗೀಕರಿಸುವುದು, ವಾರ್ಷಿಕ ಲೆಕ್ಕಪತ್ರಗಳ ಪರಿಶೀಲನೆ, ಮಹಾಸಭಾ ಸ್ವಂತ ಕಟ್ಟಡವನ್ನು ಹೊಂದುವಲ್ಲಿ ಅಗತ್ಯ ಚಿಂತನೆಯೂ ಸೇರಿದಂತೆ ಹಲವಾರು ಮಹತ್ವದ ವಿಷಯಗಳನ್ನು ಈ ಸಭೆಯಲ್ಲಿ ಚರ್ಚಿಸಲಾಗುವುದು.

ಮಾದಾರ ಚೆನ್ನಯ್ಯ ಜಯಂತಿ : ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಶಿವಶರಣ ಮಾದಾರ ಚೆನ್ನಯ್ಯ ಅವರ ಜಯಂತಿಯನ್ನು ಮಾದಿಗ ಮಹಾಸಭಾದ ಅಧ್ಯಕ್ಷ ಪಿ.ವೆಂಕಪ್ಪ ಉದ್ಘಾಟಿಸುವರು. ಮಾದಾರ ಚೆನ್ನಯ್ಯ ಸಾನ್ನಿಧ್ಯಕ್ಕೆ ಪುಷ್ಪನಮನ ಸಲ್ಲಿಸುವ ಈ ಪವಿತ್ರ ಸಮಾರಂಭದಲ್ಲಿ ಸಮಾಜದ ಎಲ್ಲ ಬಾಂಧವರು ಪಾಲ್ಗೊಳ್ಳಬೇಕೆಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹಾಗೂ ಸರ್ಕಾರಿ ಪ್ರೌಢಶಾಲಾ ನಿವೃತ್ತ ಮುಖ್ಯಾಧ್ಯಾಪಕ ಕೆ.ಎಸ್. ಬಂಗಾರಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Comments (0)

Leave a Comment