ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್: ಕರ್ನಾಟಕಕ್ಕೆ ನಾಲ್ಕು ಪ್ರಶಸ್ತಿ
- by Suddi Team
- December 28, 2025
- 9 Views
ಬೆಂಗಳೂರು:ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್-2025 ನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಕರ್ನಾಟಕ ಪಡೆದುಕೊಂಡಿದೆ.
ನವದೆಹಲಿಯಲ್ಲಿ ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್-2025 ನ್ನು ಮೋಟಾರಿಂಗ್ ವರ್ಲ್ಡ್ ಮ್ಯಾಗಜಿನ್ ಆಫ್ ಡೆಲ್ಲಿ ಪ್ರೆಸ್ ಗ್ರೂಪ್ ರವರು ಆಯೋಜಿಸಿದ್ದು, ಈ ಪ್ರಶಸ್ತಿ ಸಮಾರಂಭದ ಮುಖ್ಯ ಅತಿಥಿಯಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ ಸಚಿವ ನಿತಿನ್ ಗಡ್ಕರಿ ಹಾಗೂ ಹಲವಾರು ಗಣ್ಯವ್ಯಕ್ತಿಗಳು ಭಾಗವಹಿಸಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಹವಾಮಾನ ನೀತಿ ತಜ್ಞ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿ ಸಮಾರಂಭದಲ್ಲಿ ಕರ್ನಾಟಕ ರಾಜ್ಯವು ಒಟ್ಟು ನಾಲ್ಕು (4) ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್ ರವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿಗಳ ವಿವರವು ಕೆಳಕಂಡಂತಿದೆ:-
1) BEST STATE FOR TWO WHEELER EV ADOPTION (SILVER)
ಕರ್ನಾಟಕ ರಾಜ್ಯವು ದ್ವಿಚಕ್ರ ವಿದ್ಯುತ್ ಚಾಲಿತ ವಾಹನಗಳ ನೋಂದಣಿ ಹಾಗೂ ವಿದ್ಯುತ್ತೀಕರಣದಲ್ಲಿ ಮೇಲುಗೈ ಸಾಧಿಸಿದ ಕಾರಣ. ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಗೆ (RTO) ಬೆಳ್ಳಿ ಪ್ರಶಸ್ತಿಯು ಸಂದಿರುತ್ತದೆ.
2) BEST STATE FOR 4 WHEELER EV ADOPTION (SILVER)
ಕರ್ನಾಟಕ ರಾಜ್ಯವು ನಾಲ್ಕು ಚಕ್ರ ವಿದ್ಯುತ್ ಚಾಲಿತ ವಾಹನಗಳ ನೋಂದಣಿ ಹಾಗೂ ವಿದ್ಯುತ್ತೀಕರಣದಲ್ಲಿ 6% ಸಾಧನೆ ಮಾಡಿ, ನವೀನ ಪರಿಸರ ವ್ಯವಸ್ಥೆಯನ್ನು ಒಳಗೊಂಡಿರುವ ಕಾರಣ, ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಗೆ(RTO) ಬೆಳ್ಳಿ ಪ್ರಶಸ್ತಿಯು ಸಂದಿರುತ್ತದೆ.
3) BEST CITY FOR EV BUS ADAPTION (SILVER)
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಬೆಂಗಳೂರು ನಗರದಲ್ಲಿ ಒಟ್ಟು 1,568 ಕ್ಕೂ ಹೆಚ್ಚು ವಿದ್ಯುತ್ ಚಾಲಿತ ಬಸ್ಸುಗಳನ್ನು ಸಂಯೋಜಿತ ಬಹು ಮಾದರಿ ಯೋಜನೆಯೊಂದಿಗೆ ಒಪಂದದ ಆಧಾರಿತ ಸಂಗ್ರಹಣೆಯಲ್ಲಿ ಹೊಂದಿರುವ ಕಾರಣ, ಕರ್ನಾಟಕ ಸರ್ಕಾರದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗೆ ಬೆಳ್ಳಿ ಪ್ರಶಸ್ತಿಯು ಸಂದಿರುತ್ತದೆ.
4) BEST STATE OF EV CHARGING INFRASTRUCTURE (GOLD)- BESCOM ಗೆ ಪ್ರಶಸ್ತಿ
ಕರ್ನಾಟಕ ರಾಜ್ಯದಲ್ಲಿ ಇಂಧನ ಇಲಾಖೆಯ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (BESCOM) ವಿದ್ಯುತ್ ಚಾಲಿತ ವಾಹನಗಳಿಗೆ ಅನುಕೂಲವಾಗಲು 6,000 ಕ್ಕಿಂತ ಹೆಚ್ಚು ವಿದ್ಯುತ್ ಚಾರ್ಜಿಂಗ್ ಕೇಂದ್ರಗಳನ್ನು ಕರ್ನಾಟಕ ರಾಜ್ಯದಲ್ಲಿ ಸ್ಥಾಪಿಸಿದ್ದು ದೇಶದಲ್ಲಿಯೇ ಇದು ಪ್ರಥಮವಾಗಿರುವ ಕಾರಣ, ಕರ್ನಾಟಕ ಸರ್ಕಾರದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ (BESCOM) ಚಿನ್ನದ ಪ್ರಶಸ್ತಿಯು ಸಂದಿರುತ್ತದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ನಾಲ್ಕು (4) ಪ್ರಶಸ್ತಿಗಳನ್ನು ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್-2025 ರಲ್ಲಿ ಕರ್ನಾಟಕ ಸರ್ಕಾರಕ್ಕೆ ಪ್ರಧಾನ ಮಾಡಿದ್ದು ಕರ್ನಾಟಕ ರಾಜ್ಯವು ಗ್ರೀನ್ ಮೊಬಿಲಿಟಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಉತ್ತೇಜನ ನೀಡುವಲ್ಲಿ ಯಶಸ್ವಿಯಾಗಿದೆ.
Related Articles
Thank you for your comment. It is awaiting moderation.


Comments (0)