Video-ರೈಲಿಗೆ ಸಿಲುಕುತ್ತಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ ಸ್ಟೇಷನ್ ಮಾಸ್ಟರ್
- by Suddi Team
- December 19, 2025
- 33 Views
ಮೈಸೂರು:ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ರೈಲು ತಪ್ಪುತ್ತದೆ ಎನ್ನುವ ಅವಸರದಲ್ಲಿ ಚಲಿಸಲಾರಂಭಿಸಿದ್ದ ರೈಲನ್ನು ಹತ್ತುವ ಯತ್ನದಲ್ಲಿ ಪ್ರಾಣಾಪಾಯಕ್ಕೆ ಸಿಲುಕುತ್ತಿದ್ದ ಪ್ರಯಾಣಿಕರೊಬ್ಬರನ್ನು ಸ್ಥಳದಲ್ಲಿಯೇ ಇದ್ದ ಸ್ಟೇಷನ್ ಮಾಸ್ಟರ್ ಸಮಯ ಪ್ರಜ್ಞೆಯಿಂದ ಕಾಪಾಡಿದ್ದಾರೆ.
ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದಲ್ಲಿ ಬರುವ ಪಾಂಡವಪುರ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಟೇಷನ್ ಮಾಸ್ಟರ್ ಅಭಿಜಿತ್ ಸಿಂಗ್ ಕರ್ತವ್ಯನಿಷ್ಠೆಯಿಂದ ಒಬ್ಬ ಪ್ರಯಾಣಿಕರ ಅಮೂಲ್ಯ ಜೀವವನ್ನು ಉಳಿಸಿದರು. ಪಾಂಡವಪುರ ರೈಲು ನಿಲ್ದಾಣದಲ್ಲಿ ರೈಲು ಸಂಖ್ಯೆ 16219 ನಿಲುಗಡೆಯಾಗಿದ್ದ ವೇಳೆ, ಪಾಂಡವಪುರ ತಾಲ್ಲೂಕಿನ ನಿವಾಸಿಯಾದ ಶಿವರಾಜು ಕಟ್ಟೇರಿ (55 ವರ್ಷ) ಅವರು ಚಲಿಸುತ್ತಿದ್ದ ರೈಲಿಗೆ ಏರುವಾಗ ಜಾರಿ ಬಿದ್ದು ಅಪಾಯಕರ ಸ್ಥಿತಿಗೆ ಒಳಗಾದರು. ಘಟನೆ ಗಮನಿಸಿದ ಅಭಿಜಿತ್ ಸಿಂಗ್ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಧೈರ್ಯ ಮತ್ತು ಚುರುಕಿನಿಂದ ಪ್ರಯಾಣಿಕರನ್ನು ರಕ್ಷಿಸಿ, ಸಂಭವಿಸಬಹುದಾದ ಭಾರೀ ಅವಘಡವನ್ನು ತಪ್ಪಿಸಿದರು. ನಂತರ ಪ್ರಯಾಣಿಕರಿಗೆ ಅಗತ್ಯ ಸಹಾಯ ಒದಗಿಸಲಾಗಿದ್ದು ಅವರು ಸುರಕ್ಷಿತವಾಗಿ ಮರಳಿದ್ದಾರೆ.
ತಮ್ಮ ಪ್ರಾಣದ ಹಂಗು ತೊರೆದು ಪ್ರಯಾಣಿಕನ ಜೀವ ಉಳಿಸಿದ ಅಭಿಜಿತ ಸಿಂಗ್ ಅವರ ಧೈರ್ಯಶಾಲಿ ಮತ್ತು ಸಮಯೋಚಿತ ನಿರ್ಧಾರಕ್ಕೆ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್ ಶ್ಲಾಘಿಸಿದ್ದಾರೆ.
Related Articles
Thank you for your comment. It is awaiting moderation.


Comments (0)