ಮತ್ತೊಮ್ಮೆ ವಿಶ್ವದಾಖಲೆ ಪಡೆದ ಶಕ್ತಿ ಯೋಜನೆ:ರಾಜ್ಯ ಸಾರಿಗೆ ನಿಗಮಗಳಿಗೂ ಸಿಕ್ತು ಅಂತಾರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ಇಡೀ ದೇಶದ ಗಮನ ಸೆಳೆದಿರುವ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (Golden Book of World Records) ಮತ್ತು ಅಂತಾರಾಷ್ಡ್ರೀಯ ಬುಕ್ ಆಫ್ ರೆಕಾರ್ಡ್ಸ್(International Book of Records) ನಲ್ಲಿ ಸೇರ್ಪಡೆಯಾಗಿರುವ ಬೆನ್ನಲ್ಲೇ ಮತ್ತೊಂದು ಅಂತಾರಾಷ್ಟ್ರೀಯ ದಾಖಲೆಗೆ ಸೇರ್ಪಡೆಯಾಗಿ ಹೊಸ ದಾಖಲೆ ಬರೆದಿದೆ.

ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದೆಡೆಗಿನ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯಲ್ಲಿ 500 ಕೋಟಿ ಮಹಿಳಾ ಟಿಕೇಟ್ ಉಚಿತ ಪ್ರಯಾಣ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.ಈಗಾಗಲೇ ಶಕ್ತಿ ಯೋಜನೆಯು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (Golden Book of World Records) ಮತ್ತು ಅಂತಾರಾಷ್ಡ್ರೀಯ ಬುಕ್ ಆಫ್ ರೆಕಾರ್ಡ್ಸ್(International Book of Records) ನಲ್ಲಿ ನಲ್ಲಿ ಸೇರ್ಪಡೆಯಾಗಿತ್ತು. ಇದೀಗ ಮತ್ತೊಂದು ದಾಖಲೆಗೆ ಸೇರ್ಪಡೆಯಾಗಿದೆ.

ಇನ್ನು ಕೆಎಸ್‌ಆರ್ ಟಿಸಿಯು (1997 ರಿಂದ ಸೆಪ್ಟೆಂಬರ್ 2025 ರವರೆಗೆ) ಆತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಸಾರ್ವಜನಿಕ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಯೊಂದಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್( Golden Book of World Records) & ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್(Landan Book of World Records) ನ ಎರಡು ವಿಶ್ವದಾಖಲೆಗಳಿಗೆ ಸೇರ್ಪಡೆಯಾಗಿದ್ದು,‌ ಸರ್ಕಾರ,ನಿಗಮ ಮತ್ತು ರಾಜ್ಯಕ್ಕೆ ಹೆಸರು ತಂದಿದೆ.

1997 ರಿಂದ ಅಕ್ಟೋಬರ್ 2025 ರವರೆಗೆ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಲಭಿಸಿರುವ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಒಟ್ಟು 667, ಅದರಲ್ಲಿ ಕೆಎಸ್ ಆರ್ ಟಿಸಿ ಸಂಸ್ಥೆಯೊಂದೇ ಪಡೆದಿರುವ ಪ್ರಶಸ್ತಿಗಳು 464, ಈ ಉಪಕ್ರಮವು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ ಎನ್ನುವುದು ನಿಗಮದ ಅತ್ಯುತ್ತಮ ಸಾರಿಗೆ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.

Related Articles

Comments (0)

Leave a Comment