ಕಾರ್ಯಕ್ಷಮತೆಯಲ್ಲಿ ವಿಫಲ: ಬಿಎಂಟಿಸಿ ಇ ಬಸ್ ಆಪರೇಟರ್ಸ್ ವಿರುದ್ಧ ರಾಮಲಿಂಗಾರೆಡ್ಡಿ ಅಸಮಧಾನ
- by Suddi Team
- October 27, 2025
- 5 Views
ಬೆಂಗಳೂರು: ಎಲೆಕ್ಟ್ರಿಕ್ ಬಸ್ ಆಪರೇಟರ್ ಗಳ ಕಾರ್ಯಕ್ಷಮತೆಯಲ್ಲಿ ಲೋಪವಾಗುತ್ತಿದ್ದು, ಪ್ರಯಾಣಿಕರ ಹಿತಾಸಕ್ತಿ ಮತ್ತು ಎಲೆಕ್ನಿಕ್ ಮೊಬಿಲಿಟಿ ಯೋಜನೆಗಳ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಶೀಘ್ರದಲ್ಲೇ ಸರಿಯಾದ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ ಹಾಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಲೋಪ ಸರಿಪಡಿಸಲು ಮುಂದಾಗಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬೆಎಂಟಿಸಿಯಲ್ಲಿ FAME II & CESL (Convergence Energy Services Limited), ಸ್ಮಾರ್ಟ್ ಸಿಟಿ ಮತ್ತು ಬಂಡವಾಳ ಹೂಡಿಕೆ ಯೋಜನೆಗಳಡಿ ಕಾರ್ಯನಿರ್ವಹಿಸುತ್ತಿರುವ GCC (Gross Cost Contract) ಎಲೆಕ್ಟ್ರಿಕ್ ಬಸ್ ಆಪರೇಟರ್ ಗಳ ಕಾರ್ಯಕ್ಷಮತೆಯಲ್ಲಿ ಲೋಪ ಕಂಡುಬಂದಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ತಕ್ಷಣ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದರು.
ದೇಶದಾದ್ಯಂತ ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ನಿಕ್ ಮೊಬಿಲಿಟಿ ಕ್ಷೇತ್ರವನ್ನು ಉತ್ತೇಜಿಸಲು ಮತ್ತು ಪರಿಸರ ಸ್ನೇಹಿ ಯೋಜನೆಗೆ ಒತ್ತು ನೀಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಉಪಕ್ರಮ ಅದರಲ್ಲೂ ವಿಶೇಷವಾಗಿ, ಬೆಂಗಳೂರು ನಗರವು ಈ ಪರಿವರ್ತನಾ ಪ್ರಯತ್ನದ ಭಾಗವಾಗಿರುವುದು ಒಳ್ಳೆಯ ವಿಷಯವಾಗಿದೆ. ಆದರೆ ಬೆಂಗಳೂರು ನಗರದಲ್ಲಿ ಎಲೆಕ್ನಿಕ್ ಬಸ್ಸುಗಳ ನಿಯೋಜನೆ ಮತ್ತು ಕಾರ್ಯಾಚರಣೆಗಾಗಿ ಒಪ್ಪಂದಕ್ಕೊಳಪಟ್ಟಿರುವ ಕೆಲವು GCC (Gross Cost Contract) ಆಪರೇಟರ್‌ಗಳ ಕಾರ್ಯಕ್ರಮತೆ, ಉದ್ಯಮದ ಮಾನದಂಡಗಳಿಗೆ ತಕ್ಕ ರೀತಿಯ ಕಾರ್ಯಕ್ರಮತೆ ತೊರಿಸಲು ವಿಫಲರಾಗಿದ್ದಾರೆ ಮತ್ತು ಸೇವಾ ಶಿಸ್ತಿನ ತುರ್ತು ಗಮನಕ್ಕೆ ಕೇಂದ್ರ ಸರ್ಕಾರ ಗಮನಹರಿಸಿ ಮಧ್ಯ ಪ್ರವೇಶ ಮಾಡುವ ಅಗತ್ಯ ತುರ್ತಾಗಿದೆ ಎಂದರು.
FAME IT & CESL ಹಾಗೂ ಇತರೆ ಯೋಜನೆಗಳಡಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ GCC ಅಪರೇಟಗರ್‌ಳು OEMS (Original Equipment Manufacturer) ಗಳಾದ
1. NTPC ವಿದ್ಯುತ್ ವ್ಯಾಪರ್ ನಿಗಮ ಲಿಮಿಟೆಡ್
2. ಟಾಟಾ ಮೋಟಾರ್ಸ್ ಲಿಮಿಟೆಡ್
3. ಸ್ವಿಚ್ ಮೊಬಿಲಿಟಿ ಹಾಗೂ
4. OHM ಗೋಬಲ್ ಮೊಬಿಲಿಟಿ ಯಿಂದ ಲೋಪವಾಗುತ್ತಿದೆ ಎಂದು ಆರೋಪಿಸಿದರು.
ಅಂಕಿಅಂಶಗಳ ಪ್ರಕಾರ ಪ್ರಮುಖ ಲೋಪಗಳು/ಸಮಸ್ಯೆಗಳು:
+ ತಾಂತ್ರಿಕ ವೈಫಲ್ಯಗಳು,
+ ಬ್ಯಾಟರಿ ಸಂಬಂಧಿತ ಅವಘಡಗಳು
+ ಅಪಘಾತಗಳ ಪ್ರಮಾಣದಲ್ಲಿ ತೀವ್ರ ಹೆಚ್ಚಳ.
+ ಬಸ್ಸುಗಳ ಕಳಪೆ ನಿರ್ವಹಣೆ.
+ ಕ್ರಮಬದ್ಧ ಮತ್ತು ಸಮಗ್ರ ಚಾಲಕರ ತರಬೇತಿ ಕೊರತೆ,
+ ಬಸ್‌ಗಳ ನಿರಂತರ ಅಲಭ್ಯತೆ.
+ ಚಾಲಕರ ಕೊರತೆ
+ ಚಾಲಕರ ದಿಢೀರ್ ಮುಷ್ಕರ,
+ ಪ್ರತಿ ಬಸ್‌ಗೆ ಕನಿಷ್ಠ 2.3 ಅನುಪಾತದಲ್ಲಿ ಸಿಬ್ಬಂದಿ ನಿಯೋಜನೆ ಮಾಡಲು ಯೋಜನೆಯಿದ್ದರೂ ಕೆಲವು ಆಪರೇಟರ್ಗಳು ವೆಚ್ಚ ಕಡಿತಕ್ಕಾಗಿ ಕೇವಲ 1.9 ರಿಂದ 2.0 ರಷ್ಟು ಮಾತ್ರ ಸಿಬ್ಬಂದಿ ನಿಯೋಜಿಸುತ್ತಿರುವುದು ಕಂಡು ಬಂದಿರುತ್ತದೆ.
ಇವುಗಳೆಲ್ಲಾ ಬಸ್ಸುಗಳ ಸಮರ್ಪಕ ಕಾರ್ಯಾಚರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಮತ್ತು ಪ್ರಗತಿಶೀಲ ಬೆಂಗಳೂರು ನಗರದ ಗೌರವಕ್ಕೂ ಹಾನಿ ತಂದಿವೆ.ಬೆಂ.ಮ.ಸಾ.ಸಂಸ್ಥೆಯಿಂದ ಕಲ್ಪಿಸಲಾಗುತ್ತಿರುವ ಸಮಗ್ರ ಸಾರಿಗೆ ವ್ಯವಸ್ಥೆಯ ಮೇಲೆ ಸಂಪೂರ್ಣವಾಗಿ ಪ್ರತಿಕೂಲ ಪರಿಣಾಮ ಬೀರಲು ಕಾರಣವಾಗಿದೆ.ಬೆಂ.ಮ.ಸಾ.ಸಂಸ್ಥೆಯ ಡೀಸೆಲ್ ಬಸ್ಸುಗಳ ಕಾರ್ಯಕ್ಷಮತೆಯೊಂದಿಗೆ ಹೋಲಿಸಿದರೆ, GCC ಮಾದರಿಯಲ್ಲಿ ಕಾರ್ಯಾಚರಿಸಲಾಗುತ್ತಿರುವ ಎಲೆಕ್ನಿಕ್ ಬಸ್ಸುಗಳ ಕಾರ್ಯಾಚರಣಾ ಕಳವಳಕಾರಿಯಾಗಿದೆ. ವಿಶ್ವಾಸಾರ್ಹತೆಯಲ್ಲಿ ಕಂಡು ಬರುವ ವ್ಯತ್ಯಾಸವು GCC ಆಪರೇಟರ್‌ಗಳು ಕಾರ್ಯಾಚರಣೆಗೊಳಿಸುತ್ತಿರುವ ಎಲೆಕ್ನಿಕ್ ಬಸ್ಸುಗಳಲ್ಲಿ ಡೀಸೆಲ್ ಬಸ್ಸುಗಳಿಗಿಂತ ಸುಮಾರು ಮೂರರಷ್ಟು (3 ಪಟ್ಟು) ಕಿ.ಮೀ ರದ್ದತಿಯಾಗುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ ಎಂದು ವಿವರಿಸಿದರು.
ಇದಲ್ಲದೆ. GCC ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲೆಕ್ನಿಕ್ ಬಸ್ಸುಗಳಲ್ಲಿ ಚಾಲಕರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯ ಚಾಲನೆಗಳಿಂದ ಅಪಘಾತಗಳ ಹಾಗೂ ಮಾರಣಾಂತಿಕ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಗಂಭೀರ ವಿಷಯವಾಗಿದೆ.ಇದರ ಪರಿಣಾಮವಾಗಿ, ಸಾರ್ವಜನಿಕರು ಸಾರಿಗೆ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿದೆ.ಇದು GLC ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್ಸುಗಳ ವ್ಯವಸ್ಥಿತ ಸುಧಾರಣೆ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದರು.
ಪ್ರಸ್ತುತ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರತಿದಿನ ಸುಮಾರು 65,000 ಸುತ್ತುವಳಿಗಳನ್ನು 7,067 ವಾಹನಬಲದೊಂದಿಗೆ ಕಾರ್ಯಾಚರಣೆಗೊಳಿಸುತ್ತಿದೆ. ಇದರಲ್ಲಿ 5,423 ಡೀಸೆಲ್ ಬಸ್ಸುಗಳು ಹಾಗೂ 1,644 ಎಲೆಕ್ನಿಕ್ ಬಸ್ಸುಗಳು ಸೇರಿವೆ.ಇಷ್ಟೊಂದು ದೊಡ್ಡ ಪ್ರಮಾಣದ ಕಾರ್ಯಾಚರಣೆಯ ನಡುವೆಯೂ. ಬೆಂ.ಮ.ಸಾ.ಸಂಸ್ಥೆಯ ಡೀಸೆಲ್ ಬಸ್ಸುಗಳು ಅತ್ಯುತ್ತಮ ಸುರಕ್ಷತಾ ದಾಖಲೆಯನ್ನು ಕಾಪಾಡಿಕೊಂಡಿವೆ ಪ್ರತಿ ಒಂದು ಲಕ್ಷ ಕಿಲೋಮೀಟರ್‌ಗೆ ಕೇವಲ 0.05 ಅಪಘಾತಗಳು ದಾಖಲಾಗಿವೆ. ಎಲೆಕ್ನಿಕ್ ಬಸ್ಸುಗಳ ಆಚರಣೆಯಲ್ಲಿ. ಈ ಪ್ರಮಾಣವು ಪ್ರತಿ ಒಂದು ಲಕ್ಷ ಕಿಲೋಮೀಟರ್‌ಗೆ 0.07 ಗಳಾಗಿರುತ್ತವೆ. ಸದರಿ ದೋಷಪೂರ್ಣ ಕಾರ್ಯಾಚರಣೆಗಳು BMTC ಯ ಹೆಸರಿಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ದೂರಿದರು.
ತ್ವರಿತವಾಗಿ ಕ್ರಮ ವಹಿಸಿ:
+ FAME II, & CESL (Convergence Energy Services Limited owned by Central Public Sector Undertakings under the Ministry of Power, New and Renewable Energy), ಸ್ಮಾರ್ಟ್ ಸಿಟಿ ಮತ್ತು ಬಂಡವಾಳ ಹೂಡಿಕೆ ಯೋಜನೆಗಳಡಿ ಕಾರ್ಯನಿರ್ವಹಿಸುತ್ತಿರುವ GCC Operators ರವರುಗಳ ಕಾರ್ಯಕ್ಷಮತೆಯ ಪರಿಶೀಲನೆ ಕೈಗೊಳ್ಳಬೇಕು, ವಿಶೇಷವಾಗಿ ಅವಘಡಗಳ ಸಂಖ್ಯೆ (No. of Breakdowns) ಕಡಿಮೆಗೊಳಿಸಲು ಕ್ರಮ ವಹಿಸುವುದು, ಸುರಕ್ಷತಾ ಅನುಸರಣೆ ಮತ್ತು ಚಾಲಕರ ತರಬೇತಿ ಕುರಿತಂತೆ ಗಮನಹರಿಸಬೇಕು.
+ ಮುಂದಿನ ಟೆಂಡರ್ ದಾಖಲೆಗಳಲ್ಲಿ ಬಾಧ್ಯತೆಯ ಅಂಶಗಳನ್ನು (binding clauses) ಸೇರಿಸಿ, GCC ಆಪರೇಟಗರ್‌ಳು ಸೇವೆ ಪ್ರಾರಂಭಿಸುವ ಮೊದಲು ಸಮಗ್ರ ಮತ್ತು ಪ್ರಮಾಣಿತ ಚಾಲಕರ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಬೇಕು.
+ ಸುರಕ್ಷತೆ ಮತ್ತು ಸೇವಾ ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯ ಸಾರಿಗೆ ಸಂಸ್ಥೆಗಳು ಮತ್ತು ಸಚಿವಾಲಯ ಜಂಟಿಯಾಗಿ (Compliance Monitoring Mechanism) ಯೋಜನೆಯನ್ನು ರೂಪಿಸಬೇಕು.
Related Articles
Thank you for your comment. It is awaiting moderation.


Comments (0)