ಪಿಯುಸಿವರೆಗಿನ ಗಂಡು ಮಕ್ಕಳಿಗೆ ಉಚಿತ ಪ್ರಯಾಣ ಇಲ್ಲ! ವೈರಲ್ ಸುದ್ದಿಗೆ ಸಾರಿಗೆ ನಿಗಮದ ಸ್ಪಷ್ಟನೆ
- by Suddi Team
- April 6, 2026
- 11 Views
ಬೆಂಗಳೂರು: ರಾಜ್ಯದ ಪಿಯುಸಿವರೆಗಿನ ಗಂಡು ಮಕ್ಕಳಿಗೂ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ನೀಡಲಾಗುವುದು ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಸತ್ಯಕ್ಕೆ ದೂರವಾಗಿದ್ದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸ್ಪಷ್ಟೀಕರಣ ನೀಡಿದೆ.
ಇತ್ತೀಚೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಪಿಯುಸಿವರೆಗಿನ ಗಂಡು ಮಕ್ಕಳಿಗೂ ಉಚಿತ ಪ್ರಯಾಣ ಕಲ್ಪಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಿತ್ತು. ಈ ಶಿಫಾರಸ್ಸಿನ ಆಧಾರದ ಮೇಲೆ ಕೆಲವು ಮಾಧ್ಯಮಗಳಲ್ಲಿ ಗಂಡು ಮಕ್ಕಳಿಗೂ ಉಚಿತ ಪ್ರಯಾಣ ಲಭ್ಯವಾಗಲಿದೆ ಎಂಬ ತಪ್ಪು ಸುದ್ದಿ ಹರಿದಾಡಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ನಿಗಮದ ಅಧಿಕಾರಿಗಳು, “ಮಕ್ಕಳ ಹಕ್ಕುಗಳ ಆಯೋಗದಿಂದ ಶಿಫಾರಸು ಪತ್ರ ಬಂದಿರುವುದು ನಿಜ. ಆದರೆ, ಸಾರಿಗೆ ನಿಗಮಗಳಾಗಲಿ ಅಥವಾ ಸರ್ಕಾರವಾಗಲಿ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ನಿರ್ಧಾರವನ್ನು ಕೈಗೊಂಡಿಲ್ಲ. ಸದ್ಯಕ್ಕೆ ಗಂಡು ಮಕ್ಕಳಿಗೆ ಅನ್ವಯವಾಗುವಂತೆ ಇಂತಹ ಯಾವುದೇ ಹೊಸ ಯೋಜನೆ ಜಾರಿಗೆ ಬಂದಿಲ್ಲ” ಎಂದು ತಿಳಿಸಿದ್ದಾರೆ.
ಆದುದರಿಂದ ಸಾರ್ವಜನಿಕರು ಇಂತಹ ಯಾವುದೇ ಅನಧಿಕೃತ ವರದಿಗಳನ್ನು ನಂಬಬಾರದು ಮತ್ತು ಈ ಬಗ್ಗೆ ಗೊಂದಲಕ್ಕೀಡಾಗಬಾರದು ಎಂದು ಸಾರಿಗೆ ಸಂಸ್ಥೆ ಮನವಿ ಮಾಡಿದೆ.
Related Articles
Thank you for your comment. It is awaiting moderation.


Comments (0)