ಬೆಂಗಳೂರಿನಿಂದ ಮಾನವಿಗೆ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್ಟಿಸಿ

ಬೆಂಗಳೂರು: ಬಾಗಲಕೋಟೆಗೆ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಬೆನ್ನಲ್ಲೇ ಕೆಎಸ್ಆರ್ಟಿಸಿಯಲ್ಲಿ ಬಹು ಬೇಡಿಕೆ ಇರುವ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಬೆಂಗಳೂರು ಮಾನವಿ ನಡುವೆ ಆರಂಭಿಸಲಾಗಿದೆ‌.

ಬೆಂಗಳೂರು ಮನವಿ ನಡುವೆ ಹೊಸದಾಗಿ ನಾನ್ ಎ.ಸಿ. ಸ್ವೀಪರ್ ಬಸ್ ಸೇವೆ ಆರಂಭಗೊಂಡಿದ್ದು,ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ಕೇಂದ್ರೀಯ ವಿಭಾಗ, ಘಟಕ – 1ರಿಂದ ಈ ಬಸ್ ಕಾರ್ಯಾಚರಣೆ ಮಾಡಲಿದೆ.

ವೇಳಾಪಟ್ಟಿ:

ಬೆಂಗಳೂರಿನಿಂದ ಮಾನವಿ 09.30 pm > 05.45 am

ಮಾನವಿ ಇಂದ ಬೆಂಗಳೂರು 08.00 pm > 04.15 am

ಕಿಮೀ 457 (ಒಂದು ಕಡೆ)

ಮಾರ್ಗ:

ಬೆಂಗಳೂರು,ತುಮಕೂರು,ಹಿರಿಯೂರು,ಬಳ್ಳಾರಿ,ಸಿರುಗುಪ್, ಸಿಂಧನೂರು ಮಾರ್ಗದ ಮೂಲಕ ಮಾನವಿ ತಲುಪಲಿದೆ ಮತ್ತು ಇದೇ ಮಾರ್ಗವಾಗಿ ವಾಪಸ್ ಪ್ರಯಾಣಿಸಲಿದೆ.

ಟಿಕೆಟ್ ದರ:

ಬೆಂಗಳೂರು – ಬಳ್ಳಾರಿ : ₹ 767/-

ಬೆಂಗಳೂರು -ಸಿರುಗುಪ್ಪ : ₹ 889/-

ಬೆಂಗಳೂರು -ಸಿಂಧನೂರು :₹ 924/-

ಬೆಂಗಳೂರು – ಮಾನವಿ :₹ 990/-

ಆನ್ ಲೈನ್ ಮೂಲಕ ಬಸ್ ಟಿಕೆಟ್ ಗಳನ್ನು www. ksrtc.in ವೆಬ್ ಸೈಟ್ ಮೂಲಕ ಕಾಯ್ದಿರಿಸಬಹುದಾಗಿದೆ.

Related Articles

Comments (0)

Leave a Comment