ಕೆಎಸ್ಆರ್ಟಿಸಿ ಅಂತರ ನಿಗಮ ವರ್ಗಾವಣೆ: ನೌಕರರ ಸಂಭವನೀಯ ಪಟ್ಟಿ ಪ್ರಕಟ
- by Suddi Team
- April 9, 2026
- 10 Views
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) 2026ನೇ ಸಾಲಿನ ದರ್ಜೆ-3 (ಮೇಲ್ವಿಚಾರಕೇತರ) ಮತ್ತು ದರ್ಜೆ-4ರ ನೌಕರರ ಅಂತರ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ ಹೊರಬಿದ್ದಿದೆ. ಈ ವರ್ಗಾವಣೆ ಪ್ರಕ್ರಿಯೆಯ ಸಂಭವನೀಯ ಪಟ್ಟಿಯನ್ನು ಇಂದು (ಏಪ್ರಿಲ್ 9) ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಪರಸ್ಪರ ವರ್ಗಾವಣೆ (Mutual Transfer) ಹಾಗೂ ಸಾಮಾನ್ಯ ವರ್ಗಾವಣೆ (ಪತಿ-ಪತ್ನಿ ಪ್ರಕರಣಗಳು, ಶೇ. 40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹಾಗೂ ತೀವ್ರ ಅನಾರೋಗ್ಯದ ಪ್ರಕರಣಗಳು) ಕೋರಿ ಅರ್ಜಿ ಸಲ್ಲಿಸಿದ್ದ ನೌಕರರ ಪಟ್ಟಿಯನ್ನು ksrtc.karnataka.gov.in ನಲ್ಲಿ ವೀಕ್ಷಿಸಬಹುದಾಗಿದೆ.
ಆಕ್ಷೇಪಣೆಗೆ ಅವಕಾಶ:
ಪ್ರಕಟಿತ ಸಂಭವನೀಯ ಪಟ್ಟಿಯಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅಥವಾ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ನೌಕರರಿಗೆ ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 9ರಿಂದ ಏಪ್ರಿಲ್ 16ರ ಸಂಜೆ 5:30ರ ಒಳಗೆ ನೌಕರರು ತಮ್ಮ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಬೇಕು.
ಗಮನಿಸಬೇಕಾದ ಅಂಶಗಳು:
ಆಕ್ಷೇಪಣೆಗಳನ್ನು ಕಡ್ಡಾಯವಾಗಿ ಸಂಬಂಧಪಟ್ಟ ವಿಭಾಗದ ಆಡಳಿತಾಧಿಕಾರಿಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು.
ವೈಯಕ್ತಿಕವಾಗಿ ಅಥವಾ ಅಂಚೆ ಮೂಲಕ ಕೇಂದ್ರ ಕಚೇರಿಗೆ ಕಳುಹಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
Related Articles
Thank you for your comment. It is awaiting moderation.


Comments (0)