ದಸರಾ ಪ್ರವಾಸಿಗರಿಗೆ ಕೆಎಸ್‌ಆರ್‌ಟಿಸಿ ಬಂಪರ್ ಕೊಡುಗೆ: ಮೈಸೂರು, ಮಂಗಳೂರು ಮತ್ತು ಮಡಿಕೇರಿ ವೀಕ್ಷಣೆಗೆ ವಿಶೇಷ ಏಕದಿನ ಪ್ಯಾಕೇಜ್ ಟೂರ್ ಘೋಷಣೆ!
- by Suddi Team
- October 9, 2026
- 12 Views
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ, ಮಂಗಳೂರು ದಸರಾ ಹಾಗೂ ಮಡಿಕೇರಿ ದಸರಾ ಮಹೋತ್ಸವ-2026ರ ಪ್ರಯುಕ್ತ ಪ್ರವಾಸಿಗರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಅತ್ಯಂತ ಕೈಗೆಟುಕುವ ದರದಲ್ಲಿ ವಿಶೇಷ ‘ಒಂದು ದಿನದ ಪ್ರವಾಸ ಪ್ಯಾಕೇಜ್’ (One Day Tour Packages) ಸೇವೆಗಳನ್ನು ಪ್ರಕಟಿಸಿದೆ. ದಸರಾ ರಜೆಗಳ ಅವಧಿಯಲ್ಲಿ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿಗೆ ಭೇಟಿ ನೀಡಲು ಸುಗಮ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಎಲ್ಲಾ ಪ್ಯಾಕೇಜ್ ಬಸ್‌ಗಳು ನಿಗದಿತ ದಿನಗಳಂದು ಬೆಳಿಗ್ಗೆ ಆಯಾ ನಿಲ್ದಾಣಗಳಿಂದ ಹೊರಟು, ಪ್ರಮುಖ ಸ್ಥಳಗಳ ಸಂದರ್ಶನದ ನಂತರ ಸಾಯಂಕಾಲದ ವೇಳೆಗೆ ಮರಳಿ ಮೂಲ ನಿಲ್ದಾಣ ತಲುಪಲಿವೆ. ಪ್ರಮುಖ ಪ್ಯಾಕೇಜ್‌ಗಳ ವಿವರ ಇಲ್ಲಿದೆ:
1. ಮೈಸೂರು ದಸರಾ ಪ್ಯಾಕೇಜ್ (ಕಾರ್ಯಾಚರಣೆ: ಅಕ್ಟೋಬರ್ 15 ರಿಂದ ಅಕ್ಟೋಬರ್ 26, 2026)
ಗಿರಿ ದರ್ಶನ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಆರ್ ಹಿಲ್ಸ್, ನಂಜನಗೂಡು ಮತ್ತು ಚಾಮುಂಡಿಬೆಟ್ಟ. (ದರ: ವಯಸ್ಕರಿಗೆ ₹400, ಮಕ್ಕಳಿಗೆ ₹250)
ಜಲ ದರ್ಶನ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ, ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್. (ದರ: ವಯಸ್ಕರಿಗೆ ₹450, ಮಕ್ಕಳಿಗೆ ₹300)
ದೇವ ದರ್ಶನ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ ಮತ್ತು ಶ್ರೀರಂಗಪಟ್ಟಣ. (ದರ: ವಯಸ್ಕರಿಗೆ ₹300, ಮಕ್ಕಳಿಗೆ ₹200)
2. ಮಂಗಳೂರು ದಸರಾ ಪ್ಯಾಕೇಜ್ (ಕಾರ್ಯಾಚರಣೆ: ಅಕ್ಟೋಬರ್ 11 ರಿಂದ ಅಕ್ಟೋಬರ್ 20, 2026)
ಮಂಗಳೂರು ದಸರಾ ಪ್ಯಾಕೇಜ್ (ನವದುರ್ಗಾ ದರ್ಶನ): ಮಂಗಳೂರು ನಿಲ್ದಾಣದಿಂದ ಹೊರಟು ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳಾರ ಮಾರಿಯಮ್ಮ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಹೊಸನಾಡು ಕೋಡ್ಯಡ್ಕ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಮುಲ್ಕಿ ಸಸಹಿತ್ಲು ಭಗವತಿ, ಚಿತ್ರಾಪುರ ದುರ್ಗಾಪರಮೇಶ್ವರಿ, ಉರ್ವ ಮಾರಿಯಮ್ಮ ಹಾಗೂ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಗಳಿಗೆ ಭೇಟಿ. (ದರ: ವಯಸ್ಕರಿಗೆ ₹500, ಮಕ್ಕಳಿಗೆ ₹400)
ಮಂಗಳೂರು-ತಲಕಾವೇರಿ-ಭಾಗಮಂಡಲ ಪ್ಯಾಕೇಜ್: ಪುತ್ತೂರು ಮಹಾಲಿಂಗೇಶ್ವರ, ತಲಕಾವೇರಿ, ತ್ರಿವೇಣಿ ಸಂಗಮ-ಭಾಗಮಂಡಲ, ಅಬ್ಬಿ ಜಲಪಾತ ಮತ್ತು ರಾಜಾಸೀಟ್. (ದರ: ವಯಸ್ಕರಿಗೆ ₹600, ಮಕ್ಕಳಿಗೆ ₹500)
ಮಂಗಳೂರು-ಕೊಲ್ಲೂರು ಪ್ಯಾಕೇಜ್: ಉಡುಪಿ ಕೃಷ್ಣಮಠ, ಕಾಪು ಮಾರಿಯಮ್ಮ, ಮಂದಾರ್ತಿ ದುರ್ಗಾಪರಮೇಶ್ವರಿ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕಾ ಮತ್ತು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ. (ದರ: ವಯಸ್ಕರಿಗೆ ₹600, ಮಕ್ಕಳಿಗೆ ₹500)
ಮಂಗಳೂರು-ಸಿಗಂದೂರು ಪ್ಯಾಕೇಜ್: ಕುಂದಾಪುರ, ಸಿಗಂದೂರು ಚೌಡೇಶ್ವರಿ ದೇವಸ್ಥಾನ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ. (ದರ: ವಯಸ್ಕರಿಗೆ ₹700, ಮಕ್ಕಳಿಗೆ ₹600)
ಮಂಗಳೂರು-ಶೃಂಗೇರಿ ಪ್ಯಾಕೇಜ್: ಹೊಸನಾಡು ಕೋಡ್ಯಡ್ಕ, ಶೃಂಗೇರಿ ಶಾರದಾಂಬೆ, ಹರಿಹರಪುರ ಮಠ ಮತ್ತು ಕಿಗ‍್ಗ ಋಷ್ಯಶೃಂಗೇಶ್ವರ ದೇವಸ್ಥಾನ. (ದರ: ವಯಸ್ಕರಿಗೆ ₹600, ಮಕ್ಕಳಿಗೆ ₹500)
3. ಮಡಿಕೇರಿ ದಸರಾ ಪ್ಯಾಕೇಜ್ (ಕಾರ್ಯಾಚರಣೆ: ಅಕ್ಟೋಬರ್ 11 ರಿಂದ ಅಕ್ಟೋಬರ್ 26, 2026)
ಕಾವೇರಿ ದರ್ಶನ: ಮಡಿಕೇರಿ ನಿಲ್ದಾಣದಿಂದ ಓಂಕಾರೇಶ್ವರ ದೇವಸ್ಥಾನ, ಇಗ್ಗುತಪ್ಪ ದೇವಸ್ಥಾನ, ಭಾಗಮಂಡಲ, ತಲಕಾವೇರಿ, ಅಬ್ಬಿ ಜಲಪಾತ ಮತ್ತು ರಾಜಾಸೀಟ್. (ದರ: ವಯಸ್ಕರಿಗೆ ₹400, ಮಕ್ಕಳಿಗೆ ₹300)
ಕೊಡಗಿನ ಸೊಬಗು: ಓಂಕಾರೇಶ್ವರ ದೇವಸ್ಥಾನ, ಹಾರಂಗಿ ಜಲಾಶಯ, ಆನೆ ಕ್ಯಾಂಪ್-ದುಬಾರೆ, ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಕಾಫಿ ಪ್ಲಾಂಟೇಷನ್, ಅಬ್ಬಿ ಜಲಪಾತ ಮತ್ತು ರಾಜಾಸೀಟ್. (ದರ: ವಯಸ್ಕರಿಗೆ ₹400, ಮಕ್ಕಳಿಗೆ ₹300)
ದಸರಾ ಹಬ್ಬದ ಸರಣಿ ರಜೆಗಳಲ್ಲಿ ಪ್ರವಾಸ ಕೈಗೊಳ್ಳುವ ಸಾರ್ವಜನಿಕರು ಈ ವಿಶೇಷ ಸಾರಿಗೆಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ವಿನಂತಿಸಿದೆ.
Related Articles
Thank you for your comment. It is awaiting moderation.


Comments (0)