ರೀಲ್ಸ್ ನೋಡುತ್ತಾ ಬಸ್ ಚಲಾಯಿಸಿದ ಕೆಎಸ್ಆರ್ಟಿಸಿ ಬಸ್ ಚಾಲಕ:ಅಮಾನತುಗೊಳಿಸಿ ಆದೇಶಿಸಿದ ರಾಮಲಿಂಗಾರೆಡ್ಡಿ
- by Suddi Team
- February 7, 2026
- 14 Views
ಬೆಂಗಳೂರು:ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ರಕ್ಷಣೆಯೇ ಮೊದಲ ಆಧ್ಯತೆಯಾಗಿದ್ದು, ಇದರಲ್ಲಿ ಯಾವ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರೀಲ್ಸ್ ನೋಡುತ್ತಾ ಬಸ್ ಚಾಲನೆ ಮಾಡಿದ ನಿಗಮದ ಬಸ್ ಚಾಲಕನನ್ನು ಅಮಾನತುಗೊಳಿಸಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕ ರೀಲ್ಸ್ ನೋಡಿಕೊಂಡು ಬಸ್ ಚಾಲನೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೂಕ್ತ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದು ಅದರಂತೆ ಆ ಚಾಲಕರನ್ನು ಸಮಾನತುಗೊಳಿಸಿ ಆದೇಶಿಸಲಾಗಿದೆ.
ಘಟನೆ: ಮಳವಳ್ಳಿ ಯಿಂದ ಮೈಸೂರಿಗೆ ಹೋಗುತ್ತಿದ್ದ ಮಾರ್ಗ ಸಂಖ್ಯೆ 79 ರಲ್ಲಿ ಬಸ್ ಚಲಾಯಿಸುತ್ತಿದ್ದ ಶ್ರೀ ಮಹೇಶ್ ವಿ, ಚಾಲಕ-ಕಂ-ನಿರ್ವಾಹಕ , ಬಿಲ್ಲೆ ಸಂಖ್ಯೆ 699, ಮಳವಳ್ಳಿ ಘಟಕ, ಮಂಡ್ಯ ವಿಭಾಗರವರು ಬಸ್ ಚಾಲನೆ ಮಾಡುವಾಗ ರೀಲ್ಸ್ ವೀಕ್ಷಣೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ರಸ್ತೆಯಲ್ಲಿ ಸಂಭವಿಸುವ ಸಾಕಷ್ಟು ಅಪಘಾತಗಳು ಬೇಜವಾಬ್ದಾರಿತನ/ ನಿರ್ಲಕ್ಷ್ಯದ ಚಾಲನೆಯಿಂದ ಘಟಿಸುತ್ತವೆ. ಸಾರ್ವಜನಿಕ ಸಾರಿಗೆಯ ಬಸ್ಸಿನಲ್ಲಿ ಚಾಲಕನ ಈ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ವರ್ತನೆಗೆ ನಿಗಮವು ಅವರನ್ನು ವಿಚಾರಣಾ ಪೂರ್ವ ಅಮಾನತು ಮಾಡಿದೆ.
Related Articles
Thank you for your comment. It is awaiting moderation.


Comments (0)