ಟಿಕೆಟ್ ದರದಲ್ಲಿ ರಿಯಾಯಿತಿ ಪ್ರಕಟಿಸಿದ ಕೆಎಸ್ಆರ್ಟಿಸಿ:ಯಾವ್ ಬಸ್ ಗಳಲ್ಲಿ ಜಾರಿ ಗೊತ್ತಾ?
- by Suddi Team
- January 9, 2026
- 13 Views
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣಿಕರಿಗೆ ಹೊಸ ವರ್ಷದ ಸಂಭ್ರಮದ ಜತೆ ಸಿಹಿ ಸುದ್ದಿ ನೀಡಿದ್ದು, ಕೆಲವು ಆಯ್ದ ಮಾರ್ಗಗಳ ಬಸ್ ಪ್ರಯಾಣ ದರದಲ್ಲಿ ಶೇ.5 ರಿಂದ 15ರ ವರೆಗೆ ರಿಯಾಯಿತಿ ಘೋಷಿಸಿದೆ. ಜನವರಿ ಐದರಿಂದಲೇ ರಿಯಾಯಿತಿ ದರ ಜಾರಿಗೆ ಬಂದಿದೆ.
ಬೆಂಗಳೂರಿನಿಂದ ಮಂಗಳೂರು, ಕುಂದಾಪುರ, ಉಡುಪಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ಚೆನ್ನೈ, ಹೈದರಾಬಾದ್, ತಿರುಪತಿ, ಮಂತ್ರಾಲಯ, ಮುಂಬಯಿ, ವಿಜಯವಾಡ, ಎರ್ನಾಕುಲಂ, ಮಧುರೈ, ಕೊಯಮತ್ತೂರು ಮಾರ್ಗಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ರಿಯಾಯಿತಿ ನೀಡಿದೆ. ಈ ಮಾರ್ಗದಲ್ಲಿನ ಸಂಚಾರಕ್ಕೆ ಶೇ.5 ರಿಂದ 15 ರವರೆಗೂ ರಿಯಾಯಿತಿ ಪ್ರಕಟಿಸಿದೆ.
ಯಾವ ಬಸ್ ನಲ್ಲಿ ರಿಯಾಯಿತಿ:
ಇಷ್ಟು ಮಾರ್ಗಗಳ ಜೊತೆಗೆ ಕೆಲವು ಆಯ್ದ ಮಾರ್ಗಗಳಲ್ಲಿ ಸಂಚರಿಸುವ ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಬಸ್‌ಗಳಿಗೂ ರಿಯಾಯಿತಿ ದರ ಅನ್ವಯಿಸುತ್ತದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
Related Articles
Thank you for your comment. It is awaiting moderation.


Comments (0)