ಮೆಟ್ರೋ ಮೂಲಕ ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಗುಡ್ ನ್ಯೂಸ್;ಗೇಟ್ ‘ಡಿ’ ಓಪನ್ ಮಾಡಿದ ಬಿಎಂಆರ್ಸಿಎಲ್

ಬೆಂಗಳೂರು: ಮೆಜೆಸ್ಟಿಕ್ ನಲ್ಲಿರುವ ನಮ್ಮ ಮೆಟ್ರೋ ನಿಲ್ದಾಣದಿಂದ ಕೆಎಸ್ಆರ್ಟಿಸಿ 2,2ಎ ಟರ್ಮಿನಲ್ ಗೆ ನೇರ ಪ್ರವೇಶ ಸಿಗದೆ ಸುತ್ತು ಬಳಸಿ ಬರಬೇಕಿದ್ದ ಪ್ರಯಾಣಿಕರಿಗೆ ಇನ್ಮುಂದೆ ಆ ಸಮಸ್ಯೆ ತಪ್ಪಲಿದೆ,ಕಡೆಗೂ ಡಿ ಎಂಟ್ರಿ ಓಪನಗ ಮಾಡಿದ ನಮ್ಮ ಮೆಟ್ರೋ ಕೆಎಸ್ಆರ್ಟಿಸಿ ಟರ್ಮಿನಲ್ 2 ಗೆ ಡೈರೆಕ್ಟ್ ಎಂಟ್ರಿ ಕಲ್ಪಿಸಿದ್ದು ಪ್ರಯಾಣಿಕರಿಗೆ ಖುಷಿ ತರಿಸಿದೆ.

ದೈನಂದಿನ ಪ್ರಯಾಣಿಕರ ನಿರಂತರ ಬೇಡಿಕೆಗೆ ಅನುಗುಣವಾಗಿ, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪ್ರವೇಶ-D ಯಲ್ಲಿ, ಪ್ರವೇಶ/ನಿರ್ಗಮನ ದ್ವಾರವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು ತೆರೆಯಿತು, ಇದು ಕೆಎಸ್ಆರ್ಟಿಸಿ ಟರ್ಮಿನಲ್-2 ಮತ್ತು ಟರ್ಮಿನಲ್-2A ಗೆ ನೇರ ಪ್ರವೇಶವನ್ನು ನೀಡುತ್ತದೆ.ಈವರೆಗೂ ನಮ್ಮ ಮೆಟ್ರೋದಲ್ಲಿ ಮೆಜೆಸ್ಟಿಕ್ ಗೆ ಬಂದರೆ ತುಮಕೂರು ಭಾಗಕ್ಕೆ ಹೋಗುವ ಬಸ್ ಗಳು ನಿಲ್ಲುವ ಸ್ಥಳಕ್ಕೆ ಮೆಟ್ರೋದಿಂದ ಪ್ರವೇಶ ನೀಡಲಾಗುತ್ತಿತ್ತು ಇದರಿಂದಾಗಿ ಚಿಕ್ಕಮಗಳೂರು,ಹಾಸನ,ಧರ್ಮಸ್ಥಳ,ಶಿವಮೊಗ್ಗ,ಮಂಗಳೂರು,ದಾವಣಗೆರೆ, ಹುಬ್ಬಳ್ಳಿ,ಬೆಳಗಾವಿ,ಹೊಸಪೇಟೆ ಸೇರಿದಂತೆ ಉತ್ತರ ಕರ್ನಾಟಕ,ಮಲೆನಾಡು,ಕರಾವಳಿ ಭಾಗಕ್ಕೆ ತೆರಳಬೇಕಾದ ಪ್ರಯಾಣಿಕರು ಟರ್ಮಿನಲ್ ಗಳಿಗೆ ಸಾಕಷ್ಟು ದೂರ ನಡೆದುಕೊಂಡೇ ಸಾಗಬೇಕಾಗಿತ್ತು ಆದರೆ ಇಂದಿನಿಂದ ಆ ಸಮಸ್ಯೆ ತಪ್ಪಿದ್ದು, 2,2ಎ ಟರ್ಮಿನಲ್ ಗೆ ನೇರವಾಗಿ ಕೆಲವೇ ಹೆಜ್ಜೆಗಳಲ್ಲಿ ತಲುಪಬಹುದಾಗಿದೆ ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.

ಈ ಉಪಕ್ರಮವು ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸಲು ಮತ್ತು ಬೆಂಗಳೂರಿನ ಸಾರಿಗೆ ಪರಿಸರ ವ್ಯವಸ್ಥೆಯಾದ್ಯಂತ ತಡೆರಹಿತ ಬಹು-ಮಾದರಿ ಏಕೀಕರಣವನ್ನು ಸುಗಮಗೊಳಿಸಲು ಬಿಎಂಆರ್‌ಸಿಎಲ್ ನ ನಿರಂತರ ಪ್ರಯತ್ನಗಳ ಭಾಗವಾಗಿದೆ. ಈ ಪ್ರವೇಶದ್ವಾರವು ಪಾದಚಾರಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ವರ್ಗಾವಣೆ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಸ್ಮಾರ್ಟ್, ಪ್ರಯಾಣಿಕ-ಕೇಂದ್ರಿತ ಮೂಲಸೌಕರ್ಯದತ್ತ ನಗರದ ಮುನ್ನಡೆಯನ್ನು ಬೆಂಬಲಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Comments (0)

Leave a Comment