ಮೈಸೂರಿನಲ್ಲಿ ತಲೆ ಎತ್ತಲಿದೆ ಕೆಎಸ್ಆರ್‌ಟಿಸಿ ಹೈಟೆಕ್ ಬಸ್ ನಿಲ್ದಾಣ
- by Suddi Team
- July 19, 2025
- 2073 Views
ಮೈಸೂರು: ಸ್ವಚ್ಛ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿರುವ ಮೈಸೂರು ನಗರದಲ್ಲಿ ಸ್ವಚ್ಛ ಹಾಗೂ ಆಧುನಿಕ ವ್ಯವಸ್ಥೆ ಹೊಂದಿರುವ ಹೈಟೆಕ್ ಬಸ್ ನಿಲ್ದಾಣವನ್ನು ₹120 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಮುಂದಾಗಿದೆ.
ಭವಿಷ್ಯದ ಸಾರಿಗೆ ಸಾಮರ್ಥ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಂಡಿದ್ದು, ಮೈಸೂರಿನ ಬನ್ನಿಮಂಟಪದಲ್ಲಿ ಕೆಎಸ್ಆರ್‌ಟಿಸಿಯ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.
ಬಸ್ ನಿಲ್ದಾಣದ ವ್ಯವಸ್ಥೆಗಳ ಬ್ಲೂಪ್ರಿಂಟ್:
ಭೂ ವಿಸ್ತೀರ್ಣ: 14 ಎಕರೆಗಳು
ಒಟ್ಟು ನಿರ್ಮಿತ ವಿಸ್ತೀರ್ಣ: 4 ಲಕ್ಷ ಚದರ ಅಡಿ
ಬೇಸ್ ಮೆಂಟ್: 1.13 ಲಕ್ಷ ಚದರ ಅಡಿ
ನೆಲ ಅಂತಸ್ತು: 1.97 ಲಕ್ಷ ಚದರ ಅಡಿ
ಮೊದಲ ಅಂತಸ್ತು: 0.91ಲಕ್ಷ ಚದರ ಅಡಿ
ಅಂದಾಜು ವೆಚ್ಚ: 120 ಕೋಟಿ ರೂ.
ಸೌಲಭ್ಯಗಳು:
ನೆಲಮಾಳಿಗೆಯ ಮಹಡಿಯಲ್ಲಿ ಪಾರ್ಕಿಂಗ್ ಸೌಲಭ್ಯ: 300 ಕಾರುಗಳು, 4,000 ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳಾವಕಾಶ
ನೆಲಮಹಡಿ – ಬಸ್ ಟರ್ಮಿನಲ್
ಬಸ್ ಬೇಗಳು: 75 ಸಂಖ್ಯೆ
ಐಡಲ್ ಬಸ್ ಪಾರ್ಕಿಂಗ್: 35 ಸಂಖ್ಯೆ
ಶೌಚಗೃಹಗಳು: ಪುರುಷರ, ಮಹಿಳೆಯರು ಮತ್ತು ವಿಶೇಷ ಚೇತನರಿಗೆ 3 ಬ್ಲಾಕ್‌ಗಳು
ಲಿಫ್ಟ್‌ಗಳು: 4 ಸಂಖ್ಯೆ
ಮಕ್ಕಳಿಗೆ ಹಾಲುಣಿಸುವ ಕೊಠಡಿ
ಟಿಕೆಟ್ ಕೌಂಟರ್‌ಗಳು
ರಿಫ್ರೆಶ್‌ಮೆಂಟ್ ಕೇಂದ್ರಗಳು
ಮಹಿಳೆಯರ ವಿಶ್ರಾಂತಿ ಕೊಠಡಿ
ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ
ಕುಡಿಯುವ ನೀರು
ಪ್ರಯಾಣಿಕರ ಕಾಯುವ ಕೊಠಡಿ
ವಾಣಿಜ್ಯ ಕೇಂದ್ರಗಳು
ಲಗೇಜ್ ಕೊಠಡಿ
ಆಟೋ ಮತ್ತು ಟ್ಯಾಕ್ಸಿ ಸ್ಟ್ಯಾಂಡ್
ಮೊದಲ ಮಹಡಿ:
ಕಚೇರಿ ಸ್ಥಳ
ಸಿಬ್ಬಂದಿ ವಿಶ್ರಾಂತಿ ಕೊಠಡಿ
Related Articles
Thank you for your comment. It is awaiting moderation.
Comments (0)