ತುಂಗಾ ಜಲಾಶಯ ಭರ್ತಿ: 50 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ
- by Suddi Team
- June 28, 2018
- 226 Views
ಶಿವಮೊಗ್ಗ: ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು 19 ಕ್ರೆಸ್ಟ್ಗೇಟ್ ತೆರೆದು 50 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಜಲಾಶಯದ ಗರಿಷ್ಠ ಮಟ್ಟ 588.24 ಅಡಿ (ಸಮುದ್ರಮಟ್ಟದಿಂದ) ತಲುಪಿದ್ದು ಜಲಾಶಯದಲ್ಲಿ 3.24 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.ಕಳೆದೊಂದು ವಾರದ ಹಿಂದೆಯೇ ಜಲಾಶಯ ಪೂರ್ಣಗೊಂಡಿದ್ದು ಒಳಹರಿವಿನ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗುತ್ತಿತ್ತು.ಆದರೆ ಇಂದು ವ್ಯಾಪಕ ಮಳೆಯ ಕಾರಣ ಜಲಾಶಯದ ಒಳಹರಿವು 50 ಸಾವಿರ ಕ್ಯೂಸೆಕ್ ದಾಟಿದ ಪರಿಣಾಮ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗಿದ್ದು ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಮುಳುಗಡೆಯಾದ ಮಂಡಗದ್ದೆ:
ಪ್ರತಿಬಾರಿಯಂತೆ ಈ ಬಾರಿಯೂ ಸಂತಾನಾಭಿವೃದ್ಧಿಗಾಗಿ ದೇಶ,ವಿದೇಶದಿಂದ ವಲಸೆ ಬಂದಿದ್ದ ಬಾನಾಡಿಗಳಿಗೆ ಸಂಕಷ್ಟ ಎದುರಾಗಿದೆ.ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಅಪಾಯದ ಮಟ್ಟ ತಲುಪಿದ್ದು ಮಂಡಗದ್ದೆ ಪಕ್ಷಿಧಾಮ ನೀರಿನಲ್ಲಿ ಮುಳುಗಡೆಯಾಗಿದೆ.ನೂರಾರು ಪಕ್ಷಿ ಗೂಡುಗಳು ನೀರಿನಲ್ಲಿ ಕೊಚ್ಚಿಹೋಗುವ ಭೀತಿಗೆ ಸಿಲುಕಿವೆ,ಸಾಕಷ್ಟು ಗೂಡುಗಳಲ್ಲಿ ಪಕ್ಷಿಗಳು ಮೊಟ್ಟೆಗಳನ್ನಿಟ್ಟಿದ್ದು ಮೊಟ್ಟೆಗಳು ನೀರುಪಾಲಾಗುವ ಆತಂಕ ಎದುರಿಸುತ್ತಿವೆ.
Related Articles
Thank you for your comment. It is awaiting moderation.


Comments (0)